ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ 1242 ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ವಹಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು ಈಗಾಗಲೇ ಸಹಾಯಕ ಪ್ರಾಧ್ಯಾಪಕರ, ರಿಜಿಸ್ಟ್ರಾರ್ ಅವರ ಬಂಧನವಾಗಿದೆ. ಹೀಗಾಗಿ ಸತ್ಯ ಹೊರಬರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆ ಮತ್ತು 310 ಪ್ರಾಶುಂಪಾಲರ ಹುದ್ದೆ ನೇಮಕ ವಿಚಾರದಲ್ಲೂ ಅಕ್ರಮ ನಡೆಯುವ ಸಾಧ್ಯತೆ ಇತ್ತು. ಹಾಗೆಯೇ ಲ್ಯಾಟಾಪ್ ಮತ್ತು ಟ್ಯಾಬ್ ಹಂಚಿಕೆಯಲ್ಲೂ ಹಗರಣ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದರು.
ಇದನ್ನೂ ಓದಿ: ಅಜಾನ್ ಪ್ರತಿಯಾಗಿ ಪಾವಗಡದಲ್ಲಿ ಹನುಮಾನ್ ಚಾಲೀಸ್ ಅಚರಣೆ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಟಿ.ಪ್ರದೀಪ್ ಅವರು ಸಚಿವ ಅಶ್ವತ್ಥ್ ನಾರಾಯಣ ಅವರ ಸಂಬಂಧಿ. ಕಾಲೇಜು ಶಿಕ್ಷಣ ಇಲಾಖೆಯ ಇ- ಗೌರ್ನರ್ ನಲ್ಲಿ ಕೆಲಸ ಮಾಡುತ್ತಿರುವ ಭಗವಾನ್ ಮತ್ತು ರಮೇಶ್ ರೆಡ್ಡಿ ಮೂಲಕ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಬಹಳ ವರ್ಷಗಳಿಂದಲೂ ಈ ಇಬ್ಬರೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ವಿವಿ ಕುಲಸಚಿವ ಎನ್.ಎಸ್ ಅಶೋಕ್ ಸಾವಿಗೂ ಅಶ್ವತ್ಥ್ ನಾರಾಯಣ ಅವರು ಪರೋಕ್ಷ ಕಾರಣವಾಗಿದ್ದಾರೆ. ಸಚಿವರ ಕಚೇರಿ ಸಿಬ್ಬಂದಿಗೆ ದೊಡ್ಡ ಮಟ್ಟದ ಹಣ ಹೋಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.