Advertisement
ಜಿಲ್ಲಾ ನ್ಯಾಯಾಲಯದ ಆವರಣ ದಲ್ಲಿ ಮಂಗಳವಾರ ಉಡುಪಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಸ್ತುತ 5 ಕೋಟಿ ಪ್ರಕ ರಣಗಳು ಬಾಕಿ ಇವೆ. ಜಗತ್ತಿನ ಇತರ ನ್ಯಾಯಾಂಗ ವ್ಯವಸ್ಥೆಗೆ ಹೋಲಿ ಸಿದರೆ ನಮ್ಮಲ್ಲಿ ತ್ವರಿತವಾಗಿ ಪ್ರಕ ರಣಗಳ ವಿಲೇವಾರಿಯಾಗುತ್ತಿದೆ ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಉಪಲೋಕಾಯುಕ್ತ ನ್ಯಾ| ಬಿ. ವೀರಪ್ಪ ಹಾಗೂ ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾ| ಎ.ಎಸ್.ಬೋಪಣ್ಣ ಅವರನ್ನು ಸಮ್ಮಾನಿಸಲಾಯಿತು.
Related Articles
Advertisement
ಸಂಘದ ಅಧ್ಯಕ್ಷ ರೆನೋಲ್ಡ… ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ಟಿ. ಭಾಗವತ ಕೆ.ಜೆ. ಗಣೇಶ್ ಪ್ರಾರ್ಥಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.
ನ್ಯಾಯವಾದಿಗಳ ಕೊಡುಗೆ ಅಪಾರಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾ| ಎ.ಎಸ್. ಬೋಪಣ್ಣ ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟ ಸಹಿತ ದೇಶದ ಅಭಿವೃದ್ಧಿಯಲ್ಲಿ ನ್ಯಾಯವಾದಿಗಳ ಕೊಡುಗೆ ಅಪಾರ. ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಬೇಕು. ನ್ಯಾಯ ಒದಗಿಸುವ ಆತ್ಮವಿಶ್ವಾಸ ನ್ಯಾಯವಾದಿಗಳಲ್ಲಿರಬೇಕು. ಸಾಮಾಜಿಕ ಸಮಸ್ಯೆಗಳ ನ್ನು ಇತ್ಯರ್ಥಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.