ಹೈದರಾಬಾದ್: ತೆಲುಗು ಚಿತ್ರರಂಗದ (Tollywood) ಖ್ಯಾತ ನಟರೊಬ್ಬರ ಕೌಟುಂಬಿಕ ಹಾಗೂ ಆಸ್ತಿ ವಿಚಾರದ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು – ಪುತ್ರ ಮನೋಜ್ ಮಂಚು (Manchu Manoj) ನಡುವಿನ ಜಗಳ ತಾರಕಕ್ಕೇರಿ ಇಬ್ಬರು ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಿಸಿದ್ದಾರೆ ಎಂದು ತೆಲುಗು ವಾಹಿನಿಗಳು ವರದಿ ಮಾಡಿವೆ.
ತಂದೆ ಮೋಹನ್ ಬಾಬು (Mohan Babu) ನನ್ನ ಹಾಗೂ ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮನೋಜ್ ಮಂಚು ಗಾಯದ ಗುರುತುಗಳನ್ನು ಪೊಲೀಸರಿಗೆ ತೋರಿಸಿ ದೂರು ದಾಖಲಿಸಿದ್ದಾರೆ. ಇದಾದ ಬಳಿ ಮೋಹನ್ ಬಾಬು ಅವರು ತನ್ನ ಪುತ್ರ ಮನೋಜ್ ವಿರುದ್ದ ಪ್ರತಿ ದೂರು ದಾಖಲಿಸಿದ್ದಾರೆ. ಆತನೇ ತನ್ನ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಅವರು ಹೇಳಿರುವುದಾಗಿ ವರದಿ ತಿಳಿಸಿದೆ.
ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕುಟುಂಬದೊಳಗಿರುವ ಆಸ್ತಿ ವಿವಾದಕ್ಕೆ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಒಂದು ಕಾಲದಲ್ಲಿ ಖಳನಟನಾಗಿ ಟಾಲಿವುಡ್‌ನಲ್ಲಿ ಮೆರೆದಾಡಿದ ಮೋಹನ್ ಬಾಬು ಅಪಾರ ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹವನ್ನು ಸಂಪಾದಿಸಿದ್ದಾರೆ. ಅವರಿಗೆ ವಿಷ್ಣು, ಮನೋಜ್ ಹಾಗೂ ಒಬ್ಬ ಹೆಣ್ಣು ಮಗಳು ಇದ್ದಾಳೆ. ಆದರೆ ತಂದೆಯ ಆಸ್ತಿ ವಿಚಾರ ಮಕ್ಕಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Allu Arjun: ಮಾಲಿವುಡ್‌ನ ಹಿಟ್ ನಿರ್ದೇಶಕನ ಜತೆ ಅಲ್ಲು ಅರ್ಜುನ್ ಸಿನಿಮಾ- ವರದಿ
ಈ ಹಿಂದೆ ವಿಷ್ಣು – ಮನೋಜ್ ನಡುವೆ ಜಗಳ ಉಂಟಾಗಿ ಅದು ದೈಹಿಕ ಹಲ್ಲೆವರೆಗೂ ಹೋಗಿತ್ತು. ಈ ಸಂಬಂಧ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಮನೋಜ್ 2023ರಲ್ಲಿ ಭೂಮಾ ಮೌನಿಕಾ ರೆಡ್ಡಿ ಎನ್ನವಾಕೆಯ ಜತೆ ಎರಡನೇ ಮದುವೆ ಆಗಿದ್ದರು. ಇದು ವಿಷ್ಣುಗೆ ಇಷ್ಟವಿರಲಿಲ್ಲ. ಇದೇ ಕಾರಣವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಅಲ್ಲಿಂದಲೇ ಕುಟುಂಬದೊಳಗೆ ಒಂದಲ್ಲ ಒಂದು ವಿಚಾರಕ್ಕೆ ಜಗಳ ಶುರುವಾಗಿತ್ತು.
ಸದ್ಯ ತಂದೆ – ಮಗನ ನಡುವೆ ಹಲ್ಲೆ ನಡೆದಿದೆ ಎನ್ನುವ ವಿಚಾರ ಮಂಚು ಅವರ ಫ್ಯಾಮಿಲಿ ಪಿಆರ್ ಇದೆಲ್ಲ ಸುಳ್ಳೆಂದು ಹೇಳಿದ್ದಾರೆ. ಇಬ್ಬರು ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿಲ್ಲ, ಬದಲಿಗೆ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪಿಆರ್ ಹೇಳಿರುವುದಾಗಿ ವರದಿ ತಿಳಿಸಿದೆ.