Advertisement

SSMB29: ರಾಜಮೌಳಿ – ಮಹೇಶ್‌ ಬಾಬು ಸಿನಿಮಾದ ಲೀಡ್‌ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?

04:10 PM Dec 14, 2024 | Team Udayavani |

ಹೈದರಬಾದ್:‌ ಮಹೇಶ್‌ ಬಾಬು – ರಾಜಮಾಳಿ ಅವರ ಬಿಗ್‌ ಬಜೆಟ್‌ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿದೆ. ಶೂಟಿಂಗ್ ಆರಂಭಕ್ಕೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.

Advertisement

ಸೂಪರ್‌ ಹಿಟ್‌ ನಿರ್ದೇಶಕ ಎಸ್ ಎಸ್‌ ರಾಜಮೌಳಿ (SS Rajamouli) ಹಾಗೂ ಟಾಲಿವುಡ್‌ (Tollywood)‌ ಸ್ಟಾರ್ ಪ್ರಿನ್ಸ್ ಮಹೇಶ್‌ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಈ ಚಿತ್ರ ಭಾರತದಲ್ಲಿ ಬಜೆಟ್‌ ವಿಚಾರದಲ್ಲಿ ಹೊಸ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ. ಏಕಂದರೆ ಸಿನಿಮಾ 900-1000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವರದಿ ಆಗಿದೆ.

ಅಡ್ವೆಂಚರ್‌ ಜಂಗಲ್‌, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Upendra: ಜೈಲಿನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್‌ ಭೇಟಿಯಾದ ಉಪೇಂದ್ರ

“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್‌ ಬಾಂಡ್‌ ಅಥವಾ ಇಂಡಿಯಾನ ಜೋನ್ಸ್‌  ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್‌ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಸಿನಿಮಾದ ಬಗ್ಗೆ ಈ ಹಿಂದೆ ರಾಜಮೌಳಿ ಹೇಳಿದ್ದರು.

Advertisement

ಇದೀಗ ಚಿತ್ರದ ಬಗೆಗಿನ ಹೊಸ ಸುದ್ದಿಯೊಂದು ಹರಿದಾಡಿದೆ. ಸಿನಿಮಾದ ಪಾತ್ರವರ್ಗದ ಮಾತುಕತೆ ಹಲವು ತಿಂಗಳಿನಿಂದ ನಡೆಯುತ್ತಿದ್ದು, ಬಾಲಿವುಡ್‌ ನಟಿ, ಹಾಲಿವುಡ್‌ನಲ್ಲೂ ಮಿಂಚಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ʼಫಿಲ್ಮ್‌ ಫೇರ್‌ʼ ವರದಿ ಮಾಡಿದೆ.

ಕಳೆದ ಕೆಲ ತಿಂಗಳಿನಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಶೀಘ್ರದಲ್ಲಿ ಬರಬಹುದು ಎಂದು ವರದಿ ತಿಳಿಸಿದೆ.

ಸದ್ಯ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ದೂರ ಉಳಿದಿದ್ದು, ಹಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿ ಅವರು ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ʼSSMB29ʼ ಸಿನಿಮಾದ ಸ್ಕ್ರಿಪ್ಟ್‌ ಅಂತಿಮವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ 2025ರ ಜನವರಿ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next