Advertisement

Kolktha: ಅಕ್ರಮ ಸಂಬಂಧ ಒಪ್ಪದ್ದಕ್ಕೆ ಅತ್ತಿಗೆಯ 3 ಪೀಸ್‌ ಮಾಡಿದ!

04:47 AM Dec 16, 2024 | Team Udayavani |

ಕೋಲ್ಕತಾ: ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒಪ್ಪದ ಕಾರಣ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಂದು ಆಕೆಯ ದೇಹವನ್ನು 3 ತುಂಡಾಗಿ ಕತ್ತ ರಿ ಸಿದ ಘಟನೆ ಪ. ಬಂಗಾಲದ ಕೋಲ್ಕತಾದಲ್ಲಿ ನಡೆದಿದೆ. ಆರೋಪಿಯನ್ನು ಅತಿಯುರ್‌ ರೆಹ­ಮಾನ್‌ ಲಸ್ಕರ್‌ (35) ಎಂದು ಗುರುತಿ­ಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

ಮೃತ ಮಹಿಳೆಯು 2 ವರ್ಷಗಳ ಹಿಂದೆಯೇ ಗಂಡನಿಂದ ಬೇರ್ಪಟ್ಟಿದ್ದು, ರೆಹಮಾನ್‌ ಜತೆಯಲ್ಲೇ ಕಟ್ಟಡ ನಿರ್ಮಾಣ ಕೆಲಸಕ್ಕೆ ತೆರಳುತ್ತಿದ್ದರು. ರೆಹಮಾನ್‌ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆಕೆಯನ್ನು ಆಗಾಗ ಪೀಡಿಸುತ್ತಿದ್ದ. ಇದಕ್ಕೆ ಆಕೆ ಒಪ್ಪದ ಕಾರಣ ಶನಿವಾರ ಆಕೆಯನ್ನು ಕುತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ರುಂಡ, ಮುಂಡ, ದೇಹದ ಕೆಳ ಭಾಗವನ್ನು ಕತ್ತರಿಸಿ, ಚೀಲ ದಲ್ಲಿ ತುಂಬಿ ಬೇರೆ ಬೇರೆ ಜಾಗದಲ್ಲಿ ಎಸೆದಿದ್ದಾನೆ.

ಟಾಲಿಗಂಜ್‌ನ ಕಸದ ರಾಶಿಯಲ್ಲಿ ಮಹಿಳೆ ರುಂಡ ಪತ್ತೆಯಾದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಸಿಸಿಟಿವಿ ಪರಿ ಶೀಲನೆ ನಡೆಸಿ, ಶ್ವಾನದಳ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಬಳಿಕ ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next