ತುಮಕೂರು: ಬಿಗ್ ಬಾಸ್ ಬಳಿಕ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ (Drone Prathap) ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಯೂಟ್ಯೂವ್ ಚಾನೆಲ್‌ಗೆ ವಿಡಿಯೋ ಹಾಕುವ ನಿಟ್ಟಿನಲ್ಲಿ ಪ್ರತಾಪ್ ಕೃಷಿ ಹೊಂಡಕ್ಕೆ ಸ್ಫೋಟಕ ವಸ್ತುವನ್ನು ಎಸೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೂರು ದಿನ ಕಳೆದ ಪ್ರತಾಪ್ ಅವರನ್ನು ಸೋಮವಾರ(ಡಿ.16 ರಂದು) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಇದನ್ನು ಓದಿ: Bigg Boss Telugu 8: ಬಿಗ್‌ಬಾಸ್ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?
ವಿಚಾರಣೆ ನಡೆಸಿದ ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆಎಂಎಫ್‌ಸಿ ಕೋರ್ಟ್ ಆದೇಶ ನೀಡಿದೆ.
ಪ್ರಕರಣ ಸಂಬಂಧ ಪ್ರತಾಪ್ ಅವರ ಕ್ಯಾಮೇರಾ ಮ್ಯಾನ್ ವಿನಯ್, ಹಾಗೂ ಸೋಡಿಯೋಂ ಕೊಡಿಸಿದ್ದ ಪ್ರಜ್ವಲ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಜಮೀನಿನ ಮಾಲೀಕ ಜಿತೇಂದ್ರಜೈನ್ ಮೇಲೂ ಎಫ್ಐಆರ್ ಆಗಿದೆ. ಆದರೆ ಅವರನ್ನು ಇನ್ನು ಬಂಧಿಸಿಲ್ಲ. ಸದ್ಯ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.