Advertisement

ಜನರ ಸಮಸ್ಯೆ ಆಲಿಸಿ-ಸ್ಪಂದಿಸಿದ ಶಾಸಕ ಶ್ರೀನಿವಾಸ ಮಾನೆ

05:43 PM Jun 20, 2022 | Team Udayavani |

ಹಾನಗಲ್ಲ: ಪುರಸಭೆ ವ್ಯಾಪ್ತಿಯ 5 ಮತ್ತು 6 ನೇ ವಾರ್ಡ್‌ನ ನವನಗರ ಬಡಾವಣೆಗೆ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು, ಅಲ್ಲಿನ ನಿವಾಸಿಗಳ ಕುಂದುಕೊರತೆ ಆಲಿಸಿ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿದರು.

Advertisement

ರವಿವಾರ ಬೆಳಿಗ್ಗೆ ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ ಅವರ ಜತೆ ನವನಗರ ಬಡಾವಣೆಗೆ ಭೇಟಿ ನೀಡಿದ ಶಾಸಕರು, ಅಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ದುರಸ್ತಿಗೊಳಿಸಿ, ಬೋರವೆಲ್‌ ಬದಲಾಯಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಗುಡದರಿ ಅವರಿಗೆ ಸೂಚನೆ ನೀಡಿದರು.

ಗಲೀಜಿನಿಂದಾಗಿ ವಿಪರೀತ ಸೊಳ್ಳೆಗಳು ಸೃಷ್ಟಿಯಾಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ಸ್ವತ್ಛತೆಗೆ ಮುಂದಾಗಬೇಕೆಂದು ತಿಳಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯದೇ ಸಂಗ್ರಹಿಸಿಟ್ಟುಕೊಂಡು ಪುರಸಭೆಯ ಸ್ವತ್ಛತಾ ವಾಹನಕ್ಕೆ ನೀಡುವ ಮೂಲಕ ಸ್ವತ್ಛತೆಗೆ ಕೈಜೋಡಿಸುವಂತೆ ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾನೆ ಮನವಿ ಮಾಡಿದರು. ನಿವೇಶನ ಕುರಿತು ಅಲೆಮಾರಿ ಜನಾಂಗದವರು ಅಳಲು ತೋಡಿಕೊಂಡಾಗ, ಅದಕ್ಕೆ ಸ್ಪಂದಿಸಿದ ಶಾಸಕರು, ವಾರದೊಳಗೆ ನಿವೇಶನ ಹಸ್ತಾಂತರಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಖುಲ್ಲಾ ಜಾಗೆಯಲ್ಲಿ ವಾಸಿಸದೇ ನಿವೇಶನದಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿ, ಸರ್ಕಾರದಿಂದ ಅಗತ್ಯ ನೆರವು ದೊರಕಿಸಲು ಪ್ರಯತ್ನಿಸುವೆ. ಮನೆಗಳು ನಿರ್ಮಾಣಗೊಂಡರೆ ಹಂತ ಹಂತವಾಗಿ ಅಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಇತರ ಸಮಸ್ಯೆಗಳಿಗೆ ಸ್ಪಂದಿಸಿ, ಆದ್ಯತೆ ಮೇರೆಗೆ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಪುರಸಭೆ ಅಭಿಯಂತರ ನಾಗರಾಜ ಮಿರ್ಜಿ ಅವರಿಗೆ ಸೂಚಿಸಿದರು.

Advertisement

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಉಪಾಧ್ಯಕ್ಷ ರವಿ ಹನುಮನಕೊಪ್ಪ, ಸದಸ್ಯರಾದ ಶ್ರೀನಿವಾಸ ಭದ್ರಾವತಿ, ತಮ್ಮಣ್ಣ ಆರೆಗೊಪ್ಪ, ಪರಶುರಾಮ್‌ ಖಂಡೂನವರ, ಪ್ರಸಾದ್‌, ನಜೀರ್‌, ಬಸವರಾಜ್‌ ಹಾದಿಮನಿ, ಉಮೇಶ ಮಾಳಗಿ, ಶಿವಕುಮಾರ ಭದ್ರಾವತಿ, ರಾಜಕುಮಾರ ಶಿರಪಂತಿ, ಸುರೇಶ ನಾಗಣ್ಣನವರ, ಮೇಕಾಜಿ ಕಲಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next