Advertisement
ಕೋಡಿ ಕಡಲ ತೀರ ಅತಿ ಉದ್ದದ ಸಮುದ್ರತೀರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ದಂಡೆ ಯಾವುದೇ ಅಡಚಣೆಯಿಲ್ಲದೇ 5 ಕಿ.ಮೀ.ನಷ್ಟು ವಿಸ್ತಾರವಾಗಿದೆ. ಕೋಡಿಯಲ್ಲಿ 2 ಕಿ.ಮೀ. ಉದ್ದದ ಸೀವಾಕ್ ಹಾಗೂ ಗಂಗೊಳ್ಳಿಯಲ್ಲಿ ಅಷ್ಟೇ ಉದ್ದ ಸೀವಾಕ್ ಇದೆ. ಎರಡೂ ಸೀವಾಕ್ಗಳನ್ನು ಒಂದೇ ಕಡೆಯಿಂದ ಕಣ್ತುಂಬಿಕೊಳ್ಳಬಹುದು. ಜತೆಗೆ ಕೋಡಿಯಿಂದ ಗಂಗೊಳ್ಳಿಗೆ ದೋಣಿ ಮೂಲಕ ಹೋಗಬಹುದು.
ಕೋಡಿಯ ಜನರು ಅದೆಷ್ಟೋ ಮಂದಿಯನ್ನು ರಕ್ಷಿಸಿದ್ದಾರೆ. ಕೆಲವರ ಪ್ರಾಣ ರಕ್ಷಣೆ ಸಾಧ್ಯವಾಗದೆ ಕೈಚೆಲ್ಲಿದ್ದಾರೆ. ಹಾಗಾಗಿ ಸ್ಥಳೀಯ ಉತ್ಸಾಹಿ ಯುವಕರು, ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಜತೆಗೂಡಿ ಕೋಡಿ ಸೀವಾಕ್ನಿಂದ ಹಳೆ ಅಳಿವೆ ವರೆಗೆ ಹೆಚ್ಚು ಜನ ಬರುವ ಪ್ರದೇಶಗಳನ್ನು ಗುರುತಿಸಿ 10ಕ್ಕೂ ಅಧಿಕ ಕಡೆ ಕೆಲವು ದಿನಗಳಿಂದ ಎಚ್ಚರಿಕೆ ಫಲಕ ಅಳವಡಿಸುತ್ತಿದ್ದಾರೆ. ಇದು ಇನ್ನೂ ಮುಂದುವರಿಯಲಿದೆ.
Related Articles
ಕಣ್ಣೆದುರೇ ಎಲ್ಲೆಲ್ಲಿಂದಲೋ ಬಂದ ಜನ ಸಮುದ್ರದ ಆಳ, ಕರಾಳದ ಅರಿವಿಲ್ಲದೇ ಬಲಿಯಾಗುತ್ತಿರುವುದು ನೋಡಿ ಬೇಸರವಾಗುತ್ತಿದೆ. ಆದ್ದರಿಂದ ಶೀÅಕ್ಷೇತ್ರ ಕೋಡಿ ಎಂಬ ಸಮಾನಮನಸ್ಕರು ಜತೆಯಾಗಿ ಪ್ರವಾಸಿಗರ ಜಾಗೃತಿಗಾಗಿ ವಿವಿಧೆಡೆ ಜಾಗೃತಿ ಫಲಕ ಅಳವಡಿಸುವ ಕಾರ್ಯ ನಡೆಸುತ್ತಿದ್ದೇವೆ. ಇದಕ್ಕೆ ದಾನಿಗಳ ಸಹಕಾರವೇ ಮುಖ್ಯ ವಿನಾ ಸರಕಾರದ ಅನುದಾನವಲ್ಲ. ನಮ್ಮ ಊರಿನಲ್ಲಿ ದುರ್ಘಟನೆಗಳು ನಡೆಯಬಾರದು ಎನ್ನುವ ಕಾಳಜಿ.
-ಅಶೋಕ್ ಪೂಜಾರಿ ಕೋಡಿ, ಸ್ಥಳೀಯರು
Advertisement
-ಲಕ್ಷ್ಮೀ ಮಚ್ಚಿನ