Advertisement

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

04:04 PM Jan 03, 2025 | Team Udayavani |

ವೇಣೂರು: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಚೆನ್ನೈತೋಡಿ, ಅಜ್ಜಿಬೆಟ್ಟು, ಎಲಿಯನಡುಗೋಡು, ಕುಕ್ಕಿಪಾಡಿ ಗ್ರಾಮಗಳ ವಿವಿಧ ಕಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಸಾರ್ವಜನಿಕರಿಗೆ ಅಲ್ಲಲ್ಲಿ ಚಿರತೆ ಕಂಡುಬರುತ್ತಿದೆ.

Advertisement

ಈ ಕಾರಣ ವಾಮದಪದವು ಘಟಕದ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಡಿ.30ರಂದು ಅರಣ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಾಲೋಚನ ಸಭೆ ನಡೆಸಿದ್ದು, ಅದರಂತೆ ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಲು ತೀರ್ಮಾನಿಸಲಾಯಿತು.

ಆ ಪ್ರಕಾರ ಪ್ರಸ್ತುತ ಚಿರತೆಯ ಓಡಾಟ ಹೆಚ್ಚಾಗಿ ಕಂಡು ಬಂದಿರುವ ಚೆನ್ನೈತೋಡಿ ಗ್ರಾಮದ ಚೆನ್ನೈತೋಡಿಗುತ್ತು, ಗೋಂಜಗುತ್ತು ಹಾಗೂ ಎಲಿಯನಡುಗೋಡು ಗ್ರಾಮದ ಕುತ್ಲೋಡಿ ಎಂಬಲ್ಲಿ ಒಟ್ಟು ಮೂರು ಜಾಗಗಳಲ್ಲಿ ಸದ್ಯ ಅರಣ್ಯ ಇಲಾಖೆಯ ವತಿಯಿಂದ ಬೋನು ಅಳವಡಿಸಿದ್ದು, ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ವತಿಯಿಂದ ದಿನoಪ್ರತಿ ನಿಗಾ ವಹಿಸಲಾಗುತ್ತಿದೆ.

ವೇಣೂರು ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರಿ ಅವರ ನಿರ್ದೇಶನದಂತೆ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ ವೇಣೂರು ಶಾಖೆ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ವಿಶೇಷ ಕರ್ತವ್ಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಸುರೇಶ್, ಅರಣ್ಯ ವೀಕ್ಷಕರಾದ ಸುಖೇಶ್, ಸಂತೋಷ್, ಕರಾವಳಿ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ಸಾರ್ವಜನಿಕರಾದ ನಾರಾಯಣ ಸೇವಂತ, ಜನಾರ್ಧನ ಪೂಜಾರಿ, ಸುರೇಶ, ಪ್ರಮೋದ್ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next