ಹೆಬ್ರಿಯಲ್ಲಿ ಬೀಸಿದ ಗಾಳಿ, ಮಳೆಗೆ ಮರವೊಂದು ಉರುಳಿ ಎರಡು ವಾಹನಗಳು ಜಖಂಗೊಂಡವು. ಹೆಬ್ರಿಯ ಸ.ಪ್ರಾ. ಶಾಲೆಯ ರಸ್ತೆಯ ಬದಿ ಗ್ರಾ.ಪಂ. ನಿರ್ಮಿಸಿದ ನಿಲುದಾಣದಲ್ಲಿ ಎರಡು ವಾಹನಗಳನ್ನು ನಿಲ್ಲಿಸಲಾಗಿತ್ತು. ಸಂತೆಯಾದ ಕಾರಣ ಸಾಮಗ್ರಿಗಳನ್ನು ರಿಕ್ಷಾದಲ್ಲಿ ಇಡ ಲಾಗಿತ್ತು. ಕಾರೊಂದು ಪಕ್ಕದಲ್ಲಿತ್ತು. ಮರ ಉರುಳಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡವು. ಸ್ವಲ್ಪ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತು. ಸ್ಥಳೀಯರು ಮರವನ್ನು ತೆರವುಗೊಳಿಸಿದರು.
Advertisement
ಕಡಬದಲ್ಲಿ ಗಾಳಿ-ಮಳೆಯಿಂದಾಗಿ 2,000 ಅಡಿಕೆ ಮರ ಗಳು ಹಾನಿಗೀಡಾಗಿವೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾ ವರ ಮತ್ತು ಸುತ್ತಮುತ್ತ ಭಾರೀ ಗಾಳಿ ಮಳೆ ಸುರಿ ದಿದೆ. ರಬ್ಬರ್, ಬಾಳೆ, ಕೃಷಿಗೆ ಹಾನಿಯಾಗಿದೆ. ಕೊಕ್ಕಡ ದಲ್ಲಿಯೂ ಗಾಳಿ ಸಹಿತ ಮಳೆ ಬಂದಿದೆ. ಉಜಿರೆ, ಧರ್ಮಸ್ಥಳ, ಮುಂಡಾಜೆಯಲ್ಲಿಯೂ ಮಳೆಯಾಗಿದೆ. ಭಾರೀ ಗಾಳಿಗೆ ಕಲ್ಮಂಜ ಸಮೀಪ ರಸ್ತೆಗೆ ಮರ ಬಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಳಿಕ ಸ್ಥಳೀಯರು ಮರ ವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಬೆಳ್ಳಾರೆ, ಐವರ್ನಾಡಿನಲ್ಲಿ ಸಾಧಾರಣ ಮಳೆ ಸುರಿದಿದೆ. ತೆಕ್ಕಟ್ಟೆ, ಬ್ರಹ್ಮಾವರ, ಉಡುಪಿ, ಕೋಟೇಶ್ವರ, ಕುಂಭಾಷಿ, ಕೊಲ್ಲೂರು, ಜಡ್ಕಲ್, ಮುದೂರು, ವಂಡ್ಸೆ, ಇಡೂರು, ಶಿರ್ವ ಮೊದಲಾದೆಡೆ ಮಳೆ ಬಂದಿದೆ.