Advertisement
ಹೆದ್ದಾರಿಯಲ್ಲೇ ಬಿದ್ದಿದ್ದ ಅವರನ್ನು ಉಚ್ಚಿಲದ ಖಾಸಗಿ ಆ್ಯಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಘಟನೆಯ ಬಳಿಕ ಹೆದ್ದಾರಿಯಲ್ಲಿ ರಸ್ತೆ ವಿಭಾಜಕಗಳನ್ನು ಇರಿಸಲಾಗಿದೆ. ಹೆದ್ದಾರಿ ಗುತ್ತಿಗೆದಾರ ಕಂಪೆನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಹೆಜಮಾಡಿ ನಡಿಕುದ್ರು ಪ್ರದೇಶದಲ್ಲಿ ಡಿ. 18ರ ಸಂಜೆಯ ವೇಳೆ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತರನ್ನು ಮೂಲತಃ ಉಚ್ಚಿಲ ಭಾಸ್ಕರ ನಗರ, ಪ್ರಸ್ತುತ ನಂದಳಿಕೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಜಯ ಎನ್. ಸಾಲ್ಯಾನ್ (72) ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಕದ್ರಿಯ ತಮ್ಮ ಮಗಳ ಮನೆಗೆ ಹೋಗಿದ್ದು, ಡಿ. 17ರ ಸಂಜೆಯ ವೇಳೆಗೆ ಅಲ್ಲಿಂದ ಮನೆಗೆ ಹೋಗುವುದಾಗಿ ಹೊರಟಿದ್ದರು. ಮನೆ ತಲುಪದೇ ಇದ್ದ ಕಾರಣ ಇವರ ನಾಪತ್ತೆ ಬಗ್ಗೆ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ರಿಕಾ ವರದಿಯನ್ನು ಗಮನಿಸಿದ ಕದ್ರಿ ಪೊಲೀಸರು ಪಡುಬಿದ್ರಿಯಲ್ಲಿ ಈ ಅಪರಿಚಿತ ಮೃತದೇಹವನ್ನು ಪರಿಶೀಲಿಸುವಂತೆ ಅವರ ಮನೆಯವರಿಗೆ ತಿಳಿಸಿದ್ದರು. ಅದರಂತೆ ಮೃತದೇಹದ ಗುರುತು ಪತ್ತೆಯಾಗಿದೆ.