Advertisement
ದಕ್ಷಿಣ ಒಳನಾಡಿನಲ್ಲಿ ಡಿ. 3ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಜಿಲ್ಲೆಗಳಲ್ಲಿ ಡಿ.3ರ ವರೆಗೆ ಸಾಧಾರಣ ಮಳೆಯಾಗಲಿದೆ. ಕೆಲವೊಂದು ಕಡೆ ಭಾರೀ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಚಂಡಮಾರುತದಿಂದಾಗಿ ಕಳೆದ 4-5 ದಿನಗಳಿಂದ ದ.ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇರುವ ಕಾರಣ ಹಗಲು ಹೊತ್ತಿನಲ್ಲಿ ಬಿಸಿಲು ಕಡಿಮೆಯಾಗಿದೆ.
ಫೈಂಜಾಲ್ ಚಂಡಮಾರುತದ ಪರಿಣಾಮವಾಗಿ ಕರಾವಳಿಯ ಕೆಲವೆಡೆ ರವಿವಾರ ಮೋಡ ಕವಿದ ವಾತಾವರಣ ಇದ್ದು, ಸುಳ್ಯ, ಅರಂತೋಡು, ಪಂಜ ಭಾಗದಲ್ಲಿ ರಾತ್ರಿ ಲಘು ಮಳೆ ಸುರಿದಿದೆ.