Advertisement

Rain: ಕರಾವಳಿಯಲ್ಲಿ ಗುಡುಗು ಸಹಿತ ಉತ್ತಮ ಮಳೆ

11:47 PM Dec 05, 2024 | Team Udayavani |

ಮಂಗಳೂರು: ಫೈಂಜಾಲ್‌ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಆದರೆ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ನಿರ್ಮಾಣಗೊಂಡ ಪರಿಣಾಮ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಗುರುವಾರ ಮಧ್ಯಾಹ್ನ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement

ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಪುಂಜಾಲಕಟ್ಟೆ, ವೇಣೂರು, ಕಡಿರುದ್ಯಾವರ, ಬಂದಾರು, ಪುತ್ತೂರು, ಬಂಟ್ವಾಳ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ.

ಮಂಗಳೂರು ನಗರದಲ್ಲಿ ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯ ಯಾವುದೇ ಅಲರ್ಟ್‌ ಘೋಷಣೆ ಮಾಡಲಾಗಿಲ್ಲ. ಆದರೆ ನಿಮ್ನ ಒತ್ತಡದ ಪರಿಣಾಮ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.

ಸಿದ್ದಾಪುರ: ಗುಡುಗು ಸಿಡಿಲು ಸಹಿತ ಭಾರೀ ಮಳೆ
ಸಿದ್ದಾಪುರ: ಸಿದ್ದಾಪುರ ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಅಪರಾಹ್ನ 4ರ ತನಕ ಬಿಸಿಲಿನ ವಾತಾವರಣವಿದ್ದು, ಬಳಿಕ ಒಮ್ಮೆಲೇ ಮೋಡ ಕವಿದು, ಮಳೆ ಆರಂಭವಾಯಿತು. ಸುಮಾರು ಒಂದೂವರೆ ತಾಸು ನಿರಂತರವಾಗಿ ಮಳೆ ಸುರಿಯಿತು. ಮಳೆಯಿಂದಾಗಿ ಕಡ್ರಿ ಕಂಬಳವು ಅಸ್ತವ್ಯಸ್ತಗೊಂಡಿತ್ತು. ಕೋಣಗಳ ಮಾಲಕರು, ಕಂಬಳ ಅಭಿಮಾನಿಗಳು, ವ್ಯಾಪಾರಿಗಳು ತೀವ್ರ ತೊಂದರೆಗೆ ಒಳಗಾದರು.

ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಆಜ್ರಿ, ಕೊಡ್ಲಾಡಿ, ಆಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು-74 ಪರಿಸರದಲ್ಲೂ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next