Advertisement

Ullal: ಕಂದು ಬಣ್ಣಕ್ಕೆ ತಿರುಗಿದ ಕಡಲು

11:52 PM Dec 05, 2024 | Team Udayavani |

ಉಳ್ಳಾಲ: ಫೈಂಜಾಲ್‌ ಚಂಡಮಾರುತ ಪರಿಣಾಮದಿಂದ ಎರಡು ದಿನಗಳಿಂದ ಅರಬ್ಬಿ ಸಮುದ್ರಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಕಡಲು ಮಣ್ಣು ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿದ್ದು, ಗುರುವಾರ ಸಹಜ ಸ್ಥಿತಿಯತ್ತ ಬರುತ್ತಿದೆ.

Advertisement

ಮಳೆಗಾಲದ ಸಂದರ್ಭದಲ್ಲಿ ಸಾಧಾರಣವಾಗಿ ನದಿಯ ನೀರು ಮತ್ತು ಮಳೆ ನೀರು ಹರಿದರೂ ಈ ಮಟ್ಟಕ್ಕೆ ಕಂದು ಬಣ್ಣಕ್ಕೆ ತಿರುಗುವುದಿಲ್ಲ. ಆದರೆ ಚಂಡಮಾರುತದ ಪರಿಣಾಮದಿಂದ 2 ದಿನ ನೀಲಿ ಬಣ್ಣದ ಕಡಲು ಕಂದು ಬಣ್ಣಕ್ಕೆ ತಿರುಗಿತ್ತು.

ಉಚ್ಚಿಲ ಬಟ್ಟಪ್ಪಾಡಿ ಬಳಿ ನದಿ ನೀರು ಸಮುದ್ರಕ್ಕೆ ಸಂಗಮವಾಗುವ ಕಾರಣ ಮತ್ತು ಉಳ್ಳಾಲ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ಅಳಿವೆ ಬಾಗಿಲಿನ ಮೂಲಕ ಸಮುದ್ರಕ್ಕೆ ಸೇರುವುದರಿಂದ ಈ ಭಾಗದಲ್ಲಿ ಹೆಚ್ಚು ಮಣ್ಣು ಮಿಶ್ರಿತ ಕಂದು ಬಣ್ಣ ನೀರು ಸಮುದ್ರ ತಟದಿಂದ ಸುಮಾರು 200 ಮೀಟರ್‌ವರೆಗೆ ಕಂಡು ಬಂದಿತ್ತು. ಈ ಹಿಂದೆಯೂ ಚಂಡಮಾರುತದ ಸಂದರ್ಭ ಹೀಗಾಗಿತ್ತು ಎನ್ನುತ್ತಾರೆ ಸ್ಥಳೀಯರು.

 

Advertisement

Udayavani is now on Telegram. Click here to join our channel and stay updated with the latest news.

Next