Advertisement

ಹಳೆ ವಿಮಾನ ನಿಲ್ದಾಣ ರಸ್ತೆ ಕಾಮಗಾರಿ ಚಾಲನೆ

01:52 PM Feb 02, 2018 | Team Udayavani |

ಬಜಪೆ: ಜಿಲ್ಲೆ ಮತ್ತು ಇತರ ರಸ್ತೆಗಳು-ನವೀಕರಣ ಯೋಜನೆಯಡಿ 1 ಕೋಟಿ ರೂ. ಅನುದಾನದಲ್ಲಿ ನಡೆದ ಬಜಪೆ ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಕೆ. ಅಭಯಚಂದ್ರ ಜೈನ್‌ ಅವರು ಗುರುವಾರ ಉದ್ಘಾಟಿಸಿದರು.

Advertisement

ಒಟ್ಟು 1.65 ಕಿ.ಮೀ. ರಸ್ತೆ ಅಭಿವೃದ್ಧಿ, 650 ಮೀ. ಉದ್ದಕ್ಕೆ ರಸ್ತೆಯನ್ನು 7 ಮೀ. ವಿಸ್ತರಣೆ ಕಾಮಗಾರಿ ಹಾಗೂ ರಸ್ತೆ ಮರುಡಾಮರು ಕಾಮಗಾರಿಗೆ ಜ.15 ರಂದು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು. ಕೇವಲ 15 ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡಿದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆ
ಬಜಪೆ ಹಾಗೂ ಮಳವೂರು ಗ್ರಾಮವನ್ನು ಒಗ್ಗೂಡಿಸಿ ಬಜಪೆ ನಗರ ಪಂಚಾಯತ್‌ ಆಗಿ ಮಾಡುವ ಬಗ್ಗೆ ತಾನು ಪ್ರಯತ್ನ ಮಾಡುತ್ತೇನೆ. ತ್ಯಾಜ್ಯ ವಿಲೇವಾರಿ ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ. ನ. ಪಂ. ಆದಲ್ಲಿ ಅನುದಾನ ಹೆಚ್ಚು ಸಿಗಲಿದೆ. ಪಿಪಿ ಯೋಜನೆಯ 16 ಕೋಟಿ ರೂ. ಅನುದಾನದಲ್ಲಿ ಬಜಪೆಯಲ್ಲಿ ಹೊಸ ಮಾರುಕಟ್ಟೆ ನಿರ್ಮಾಣವಾಗಲಿದೆ. ಮಂಗಳಪೇಟೆಯಿಂದ ಬಜಪೆ ಪೊಲೀಸ್‌ ಠಾಣೆಯವರೆಗೆ 11 ಕೋಟಿ ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾಯಸ್‌, ಉಪಾಧ್ಯಕ್ಷ ಮಹಮದ್‌ ಶರೀಫ್‌, ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯರಾದ ಸಚಿನ್‌ ಕುಮಾರ್‌, ಬಜಪೆ ಗ್ರಾ.ಪಂ. ಸದಸ್ಯರಾದ ಸುರೇಂದ್ರ ಪೆರ್ಗಡೆ, ಸಾಹುಲ್‌ ಹಮೀದ್‌, ವೇದಾವತಿ, ಜಾಕೊಬ್‌ಪಿರೇರಾ, ಸಿರಾಜ್‌ ಅಹಮದ್‌, ನಝೀರ್‌, ಆಯಿಷಾ, ಮನ್ಸೂರ್‌ ಆಲಿ, ಉದಯ ಕುಮಾರ್‌, ಮಳವೂರು ಗ್ರಾ.ಪಂ. ಸದಸ್ಯ ಪ್ರಸಿಲ್ಲಾ, ಬಜಪೆ ವಲಯ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಜೆ.ಎಂ. ಹಾಜಿ ಉಪಸ್ಥಿತರಿದ್ದರು. ಮಹಮದ್‌ ಹನೀಫ್‌ ಅವರು ನಿರೂಪಿಸಿದರು.

ಮಳವೂರಿಗೆ ಹೊಸ ಸೇತುವೆ
ಈಗಾಗಲೇ ರಾಜ್ಯ ಮುಖ್ಯ ಮಂತ್ರಿಗಳು ರಸ್ತೆ ಅಭಿವೃದ್ಧಿಗಾಗಿ ದೊಡ್ಡ ಮೊತ್ತವನ್ನು ನೀಡಿದ್ದಾರೆ. ಮಳವೂರು ಸೇತುವೆಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ಹಾಗೂ ಹೊಸ ಸೇತುವೆ, ಮಳವೂರಿನಿಂದ ಬಜಪೆಗೆ ದ್ವಿಪಥ ರಸ್ತೆ, ದಾರಿದೀಪದ ವ್ಯವಸ್ಥೆಗೆ ಈಗಾಗಲೇ ಬಜೆಟ್‌ ಅನುದಾನ ಮೀಸಲಿಡಲಾಗಿದೆ ಎಂದು ಅಭಯಚಂದ್ರ ಜೈನ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next