Advertisement

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

12:59 AM Dec 21, 2024 | Team Udayavani |

ಮಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಆಡಳಿತಕ್ಕೆ ಬಂದ ಬಳಿಕ ಜಂಗಲ್‌ ರಾಜ್‌ ನಿರ್ಮಾಣವಾಗಿದೆ. ಕಾಂಗ್ರೆಸ್‌ ಗೂಂಡಾಗಳಿಗೆ ಮಣೆ ಹಾಕುತ್ತಿದೆ ಎಂಬುದು ಬೆಳಗಾವಿ ಅಧಿವೇಶನದ ವೇಳೆ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತ ನಾಡಿ, ಸಂವಿಧಾನದ ಘನತೆ ಗೌರವದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ದಿಲ್ಲಿ ಮತ್ತು ಕರ್ನಾಟಕದಲ್ಲಿ ಸಂವಿಧಾನದ ಕಗ್ಗೊಲೆ ಮಾಡಿದೆ. ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ವರ್ತನೆ ಮತ್ತು ಸಂಸದರ ಮೇಲಿನ ಹಲ್ಲೆ ಖಂಡನೀಯ.

ರಾಹುಲ್‌ವಿರುದ್ಧ ತತ್‌ಕ್ಷಣ ಕಠಿನ ಕ್ರಮ ಕೈಗೊಳ್ಳಬೇಕು. ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧವೂಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸದನದ ಒಳಗೆ ನಡೆದ ವಿಷಯಗಳ ಕುರಿತಂತೆ ಸಭಾಪತಿ ಯವರು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಿ.ಟಿ.ರವಿ ತಮ್ಮ ಮೇಲಾದ ಹಲ್ಲೆಗೆ ದೂರು ನೀಡಿದರೂ ಯಾರನ್ನೂ ಬಂಧಿಸಿಲ್ಲ. ಜನಪ್ರತಿನಿಧಿಗಳ ಸ್ಥಿತಿಯೇ ಹೀಗಾದರೆ ಹೇಗೆ? ಗೃಹಸಚಿವರು ಪೊಲೀಸರನ್ನು ಕೂಲಿಯಾಳುಗಳಂತೆ ಬಳಸುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಸಿದ್ದರಾಮ್ಯನವರಿಂದಾಗಿ ಗೂಂಡಾ ರಾಜ್ಯವಾಗುತ್ತಿದೆ ಎಂದು ಅವರು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.