Advertisement

Mangaluru: ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಗೆ ವೇಗ; ಶೀಘ್ರ ಪೂರ್ಣ ನಿರೀಕ್ಷೆ

02:38 PM Dec 13, 2024 | Team Udayavani |

ಮಹಾನಗರ: ನಗರದ ಹೃದಯ ಭಾಗದಲ್ಲಿ ನಿರ್ಮಾಣ ಆಗುತ್ತಿರುವ ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಆಗುತ್ತಿರುವ ಕಾಮಗಾರಿಯನ್ನು ಸುಮಾರು ಐದು ತಿಂಗಳೊಳಗೆ ಪೂರ್ಣಗೊಳಿಸಲು ಸ್ಮಾರ್ಟ್‌ಸಿಟಿ ಲಿ. ನಿರ್ಧರಿಸಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಗೆ ವಿವಿಧ ಕಾಮಗಾರಿಗಳನ್ನು ಅವಲೋಕಿಸಿದರೆ ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿ ಆರಂಭದಿಂದಲೇ ವೇಗ ಪಡೆದುಕೊಂಡಿತ್ತು. ಈ ಮಾರುಕಟ್ಟೆಯ ಸುತ್ತಲೂ ತೆರೆಯ ಜಾಗ, ಎತ್ತರವಿರದ ಕಟ್ಟಡ, ನೀರಿನ ವ್ಯವಸ್ಥೆ ಸಹಿತ ಮೂಲ ಸೌಕರ್ಯವಿದೆ. ನಾಲ್ಕೂ ಕಡೆ ರಸ್ತೆ ಇರುವ ಕಾರಣಕ್ಕೆ ಕಾಮಾಗಾರಿಗೆ ಯಾವುದೇ ರೀತಿಯ ವಿಳಂಬ ಆಗಲಿಲ್ಲ. ಕಳೆದ ವರ್ಷ ಮಾ. 5ರಂದು ನೂತನ ಮಾರುಕಟ್ಟೆಗೆ ಶಿಲಾನ್ಯಾಸ ನಡೆಸಲಾಗಿತ್ತು.

ಕೋವಿಡ್‌ ಲಾಕ್‌ಡೌನ್‌ಗೂ ಮುನ್ನವೇ ನೂತನ ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಯ ಟೆಂಡರ್‌ ಅಂತಿಮವಾಗಿ ಗುತ್ತಿಗೆದಾರರ ನೇಮಕವಾಗಿತ್ತು. ಆದರೆ ಆಗ ನಿಗದಿ ಮಾಡಿದ ಮೊತ್ತ, ಲಾಕ್‌ಡೌನ್‌ ಬಳಿಕದ ಮೊತ್ತದಲ್ಲಿ ವ್ಯತ್ಯಾಸವಾದ ಕಾರಣದಿಂದ ಟೆಂಡರ್‌ ವಹಿಸಿದವರು ಕೊಂಚ ಸಮಯ ನಿರಾಸಕ್ತಿ ತೋರಿದ್ದರು. ಬಳಿಕ ಮಾತುಕತೆ ನಡೆಸಿ ಸರಿಪಡಿಸಲಾಗಿತ್ತು. ಮಳೆ ಕೂಡ ಜೋರಾಗಿದ್ದರಿಂದ ಕೆಲಸ ನಡೆಸುವುದು ಕಷ್ಟವಾದ್ದರಿಂದ ಕಾರಣದಿಂದ ಕಾಮಗಾರಿ ತಡವಾಗಿ ಆರಂಭಗೊಂಡಿತ್ತು.

ಸದ್ಯ ನೂತನ ಸೆಂಟ್ರಲ್‌ ಮಾರುಕಟ್ಟೆ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಎಸ್ಕಲೇಟರ್‌, ಜನರೇಟರ್‌, ಪೈಂಟಿಂಗ್‌, ಪಾರ್ಕಿಂಗ್‌ ವಿಭಾಗ, ಮಾರ್ಕಿಂಗ್‌, ಎಲೆಕ್ಟ್ರಿಕ್‌ ಕೆಲಸ ಸಹಿತ ಕೊನೆಯ ಹಂತದ ಕೆಲವೊಂದು ಕಾಮಗಾರಿಗಳು ನಡೆಯಲು ಬಾಕಿ ಇದೆ. ಈ ಕೆಲಸವನ್ನು ಸುಮಾರು ಐದು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸ್ಮಾರ್ಟ್‌ಸಿಟಿ ಯೋಜನೆ ರೂಪಿಸುತ್ತಿದೆ.

ಕಟ್ಟಡದಲ್ಲೇನಿದೆ?
ಒಟ್ಟು 3.61 ಎಕರೆ ಸ್ಥಳದಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸ್ಮಾರ್ಟ್‌ಸಿಟಿಯು ಒಟ್ಟು 114 ಕೋ. ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 5 ಲಕ್ಷ ಚ.ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಹೊಸ ಮಾರುಕಟ್ಟೆಯಲ್ಲಿ ನೆಲ ಅಂತಸ್ತು ಮತ್ತು ಅದರ ಮೇಲ್ಗಡೆ 5 ಮಹಡಿಗಳಿರುತ್ತವೆ. ತಳ ಭಾಗದ ಎರಡು ಅಂತಸ್ತುಗಳು ವಾಹನ ಪಾರ್ಕಿಂಗ್‌ಗೆ ಮೀಸಲಾಗಿರುತ್ತದೆ. ಮಾರುಕಟ್ಟೆಯ 1.50 ಲಕ್ಷ ಚ.ಅಡಿ ಪಾಲಿಕೆಗೆ ಜಾಗ ನೀಡಬೇಕು. ಉಳಿದ 3.50 ಲಕ್ಷ ಚ.ಅಡಿ ಜಾಗದಲ್ಲಿ ಇತರೇ ವಾಣಿಜ್ಯ ಚಟುವಟಿಕೆಗೆ ಉಪಯೋಗ ಮಾಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next