Advertisement
ಸಭೆಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ನಾಮಕರಣದ ಕುರಿತಾದ ಈ ಆರು ಕಾರ್ಯಸೂಚಿಗಳು ಸರಕಾರದ ಮಾರ್ಗಸೂಚಿ ಪ್ರಕಾರ ಈ ವಿಚಾರವು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು ಒಂದು ತಿಂಗಳ ಒಳಗೆ ಆಕ್ಷೇಪಣೆ ಅಥವಾ ಸಲಹೆಯನ್ನು ಆಹ್ವಾನಿಸಬೇಕಿದೆ. ಆಕ್ಷೇಪಣೆ/ ಸಲಹೆ ಬಂದಲ್ಲಿ ಮುಂದಿನ ಪಾಲಿಕೆ ಸಭೆಯಲ್ಲಿ ಮತ್ತೆ ಮಂಡಿಸಬೇಕಿದೆ. ಸ್ಥಾಯೀ ಸಮಿತಿಯಲ್ಲಿ ಇದು ಪರಿಶೀಲನೆ ಆಗಿ, ಸರಕಾರದ ಅನುಮೋದನೆ ಪಡೆಯಬೇಕಿದೆ.
ಕುಂಟಿಕಾನ ಜಂಕ್ಷನ್ ವೃತ್ತಕ್ಕೆ ‘ಶ್ರೀ ಭಕ್ತ ಕನಕದಾಸ’ ವೃತ್ತ ಎಂದು ನಾಮಕರಣ ಮಾಡುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಹಾಗೂ ಪಾಲಿಕೆಯ ಹಿರಿಯ ಸದಸ್ಯ ಹಾಗೂ ಮಾಜಿ ಮೇಯರ್ ಶಶಿಧರ ಹೆಗ್ಡೆ ಹಾಗೂ ಕರಾವಳಿ ಕುರುಬರ ಸಂಘದಿಂದ ಬೇಡಿಕೆ ಸಲ್ಲಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕನಕದಾಸರ ಭಕ್ತರಿದ್ದಾರೆ. ಮಂಗಳೂರು ವಿವಿಯಲ್ಲೂ ಕನಕ ಪೀಠವಿದೆ. ಕನಕ ದಾಸರ ಸ್ಮರಣೆಗೆ ಒಂದು ಜಾಗ ಬೇಕು ಎನ್ನುವುದು ಬೇಡಿಕೆ. ಕೊಂಚಾಡಿ ಮಹಾಲಸಾ ದೇವಸ್ಥಾನ ರಸ್ತೆಗೆ ‘ಶ್ರೀ ಕಾಶೀಮಠ ರಸ್ತೆ’
ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಮುಂಭಾಗದ ರಸ್ತೆಯನ್ನು ‘ಶ್ರೀ ಕಾಶಿಮಠ ರಸ್ತೆ’ ಎಂದು ನಾಮಕರಣ ಮಾಡುವಂತೆ ಶಾಸಕ ಡಾ| ಭರತ್ ಶೆಟ್ಟಿ ಮತ್ತು ಸ್ಥಳೀಯ ಸದಸ್ಯೆ ಸಂಗೀತಾ ಆರ್. ನಾಯಕ್ ಮನವಿ ಮಾಡಿದ್ದಾರೆ. ಗೌಡ ಸಾರಸ್ವತ ಸಮಾಜದಲ್ಲಿ ಕಾಶಿಮಠ ಸಂಸ್ಥಾನವು ಮಹತ್ತರ ಸ್ಥಾನ ಹೊಂದಿದ್ದು, 1542ರಲ್ಲಿ ಸ್ಥಾಪನೆಗೊಂಡಿದ್ದು, ಕಾಶಿಮಠ ಸಂಸ್ಥಾನಕ್ಕೂ ಮಹಾಲಸಾ ನಾರಾಯಣಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.
Related Articles
ಪಡೀಲ್ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ತಿರುವಿನಲ್ಲಿ ‘ಸಿಎ ಇಂಡಿಯಾ ಸರ್ಕಲ್’ ಅಥವಾ ‘ಸಿಎ ಇಂಡಿಯಾ ಜಂಕ್ಷನ್’ ನಿರ್ಮಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅಜೆಂಡಾ ಮಂಡಿಸಿದ್ದಾರೆ. ಪಾಲಿಕೆಯ 50ನೇ ಅಳಪೆ ವಾರ್ಡ್ನ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಶಾಖೆ ಪ್ರೀಮಿಯರ್ ಅಕೌಂಟಿಂಗ್, ವಿಶ್ವದ 2ನೇ ಅತೀ ದೊಡ್ಡ ಲೆಕ್ಕಪತ್ರ ಸಂಸ್ಥೆಯಾಗಿದೆ. 3,500 ವಿದ್ಯಾರ್ಥಿಗಳು ಸದಸ್ಯತ್ವ ಹೊಂದಿದ್ದಾರೆ.
Advertisement
ಐಎಂಎ ಭವನ ಪಕ್ಕದ ರಸ್ತೆಗೆ ‘ಐಎಂಎ ವೃತ್ತ’ಅತ್ತಾವರ ರಸ್ತೆಯಲ್ಲಿರುವ ಐಎಂಎ ಭವನದ ಸಮೀಪದ ವೃತ್ತವನ್ನು ಐಎಂಎ ವೃತ್ತ ಎಂದು ನಾಮಕರಣ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕವು ಪಾಲಿಕೆಗೆ ಮನವಿ ಮಾಡಿದೆ. ಐಎಂಎ ಡಾಕ್ಟರ್ಸ್ ಆಫ್ ಮಾಡರ್ನ್ ಮೆಡಿಸಿನ್ನ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು, 1928ರಲ್ಲಿ ಸ್ಥಾಪನೆಗೊಂಡಿದೆ. ದೆಹಲಿಯಲ್ಲಿ ಪ್ರಧಾನ ಕಚೇರಿ ಹಾಗೂ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.
ಉರ್ವ ಮಾರ್ಕೆಟ್ ಬಳಿ ಇರುವ ವೃತ್ತಕ್ಕೆ ‘ಶ್ರೀ ಮಾರಿಯಮ್ಮ ವೃತ್ತ’ ಎಂದು ನಾಮಕರಣಕ್ಕೆ ಕ್ರಮ ವಹಿಸಲು ಶಾಸಕ ವೇದವ್ಯಾಸ ಕಾಮತ್, ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಶನ್ರವರ ಮನವಿಯನ್ನು ಕಾರ್ಯಸೂಚಿಯಲ್ಲಿ ಮಂಡಿಸಲಾಗಿದೆ. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಮಂಗಳೂರಿನ ಪ್ರಸಿದ್ಧ ಗ್ರಾಮದೇವಿಯ ದೇವಸ್ಥಾನವೂ ಆಗಿದೆ. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಮೋರ್ಗನ್ಸ್ಗೆàಟ್ನ ಎಂಫಾಸಿಸ್ ಜಂಕ್ಷನ್ ಎದುರುಗಡೆ ಇರುವ ವೃತ್ತಕ್ಕೆ ‘ಶ್ರೀ ಗೋರಕ್ಷನಾಥ ಪಾಲೆಮಾರ್ ವೃತ್ತ’ ಎಂದು ನಾಮಕರಣ ಮಾಡುವಂತೆ ಮನಪಾ ಸದಸ್ಯೆ ಪಿ.ಎಸ್. ಭಾನುಮತಿ ಅವರ ಮನವಿ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಅವರ ಟಿಪ್ಪಣಿಯೊಂದಿಗೆ ಕಾರ್ಯಸೂಚಿ ಮಂಡನೆಯಾಗಿದೆ. ಶ್ರೀ ಗೋರಕ್ಷನಾಥರು ನೇಪಾಲ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿ ಯೋಗ ಪ್ರಚಾರ ಮಾಡಿ 10ನೇ ಶತಮಾನದ ಮಧ್ಯಭಾಗದಲ್ಲಿ ನಾಥ ಪಂಥದ ಪ್ರಥಮ ವಿಲಾಸಿನಿ ಪಿಂಗಳಾದೇವಿ ಜತೆ ಗೂಡಿ ತುಳುನಾಡು ಪ್ರವೇಶಿಸಿದ್ದರು. ಈ ಸಂದರ್ಭ ಜಪ್ಪು ಪ್ರದೇಶದ ನೇತ್ರಾವತಿ ನದಿಯ ತಟದಲ್ಲಿ ಶ್ರೀ ಗೋರಕ್ಷನಾಥರು ತಮ್ಮ ಕೈಯ್ಯಲ್ಲಿದ್ದ ದಂಡ ನೆಲಕ್ಕೂರಿ ಕೆಲ ವರ್ಷಗಳ ಕಾಲ ಯೋಗಗೈದಿದ್ದರು.