ಕಾಸರಗೋಡು: ಚೂರಿಯ ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಪ್ರಕರಣಕ್ಕೆ ಸಂಬಂಧಿಸಿ ಪಾರೆಕಟ್ಟೆಯ ಅಭಿಲಾಷ್, ಕೇಳುಗುಡ್ಡೆಯ ಮನೀಶ್ ಕುಮಾರ್, ಆರ್.ಡಿ.ನಗರದ ಅವಿನಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಅನರ್ಹ ಪಿಂಚಣಿ: ಅಮಾನತುಕಾಸರಗೋಡು: ಬಡ ಕುಟುಂಬಕ್ಕೆ ಸೇರಿದ ಹಿರಿಯ ನಾಗರಿಕರಿಗೆ ವಿತರಿಸುವ ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನರ್ಹವಾಗಿ ಪಡೆದ ಸರಕಾರಿ ಸಿಬಂದಿಗಳ ಪೈಕಿ ಕಾಸರಗೋಡು ಜಿಲ್ಲೆಯ ಮಣ್ಣು ಸಂರಕ್ಷಣಾ ಇಲಾಖೆಯ ಸಿಬಂದಿ ಸಹಿತ ಆರು ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಕಾಸರಗೋಡು: ಹೊಸದುರ್ಗ ಮಡಿಕೈ ಅಡ್ಕತ್ತ್ಪರಂಬಿನ ಶೈಜು ಅವರ ಪತ್ನಿ ಅಂಜಲಿ (30) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರಣ ತಿಳಿದು ಬಂದಿಲ್ಲ. ಇಲಿ ವಿಷ ಪ್ರಾಶನ: ವಿದ್ಯಾರ್ಥಿನಿ ಸಾವು
ಕಾಸರಗೋಡು: ಇಲಿ ವಿಷ ಸೇವಿಸಿದ ನರ್ಸಿಂಗ್ ವಿದ್ಯಾರ್ಥಿನಿ ಮಡಿಕೈ ತಾಯನ್ನೂರು ತೆರಳ ಚಪ್ಪಾರಪುರಯಿಲ್ ದರ್ಶನ(22) ಸಾವಿಗೀಡಾದರು. ಮಂಗಳೂರಿನ ನರ್ಸಿಂಗ್ ತರಬೇತಿ ಕೇಂದ್ರದಲ್ಲಿ ಅಂತಿಮ ವರ್ಷ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ಹಾಸ್ಟೆಲ್‌ನಲ್ಲಿ ಇಲಿ ವಿಷ ಸೇವಿಸಿದ್ದರು.
Related Articles
ಕಾಸರಗೋಡು: ನಗರದ ಹಳೆ ಪ್ರಸ್ ಕ್ಲಬ್ ಸಮೀಪ ಅಮೈ ಜಂಕ್ಷನ್‌ನಲ್ಲಿರುವ ಮರದ ಮೇಲಿನಿಂದ ವಿದ್ಯುತ್ ತಂತಿ ಮೇಲೆ ಬಿದ್ದು ಹೆಬ್ಟಾವು ಸಾವಿಗೀಡಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
Advertisement
ರೈಲು ಢಿಕ್ಕಿ ಹೊಡೆದು ಸಾವುಕಾಸರಗೋಡು: ಹೊಸದುರ್ಗ ಕುಶಾಲನಗರದಲ್ಲಿ ರೈಲು ಢಿಕ್ಕಿ ಹೊಡೆದು ಹೊಸದುರ್ಗ ಕೊವ್ವಲ್‌ಪಳ್ಳಿಯ ಕೆ.ವಿ.ಸುನಿಲ್ ಕುಮಾರ್(50) ಸಾವಿಗೀಡಾದರು.