Advertisement

ನರೇಂದ್ರಬಾಬು ಮುಂದಿನ ಚಿತ್ರ ಚೌಪದಿ

11:13 AM Sep 25, 2018 | |

ಅನಂತ್‌ನಾಗ್‌ ಅಭಿನಯದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ನಿರ್ದೇಶಿಸಿದ್ದ ನರೇಂದ್ರ ಬಾಬು ತೆಲುಗಿನ “ಮೆರುಪುಲ ಮರಕಲು’ (ಮಿಂಚಲ್ಲಿ ಕರೆಗಳು) ಕಾದಂಬರಿಯನ್ನು ಚಿತ್ರ ಮಾಡುವುದಾಗಿ ಹೇಳಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ತಯಾರಾಗಲಿದೆ ಎಂಬುದನ್ನೂ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಮಹಿಳಾ ಪ್ರಧಾನವಾಗಿರುವ ಕಥೆಗೆ ನಾಯಕಿಯ ಆಯ್ಕೆ ಪಕ್ಕಾ ಆಗಿರಲಿಲ್ಲ.

Advertisement

ಶೀರ್ಷಿಕೆ ಕೂಡ ಅಂತಿಮಗೊಂಡಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ನಿರ್ದೇಶಕ ನರೇಂದ್ರ ಬಾಬು ಚಿತ್ರಕ್ಕೆ “ಚೌಪದಿ’ ಎಂದು ನಾಮಕರಣ ಮಾಡಿದ್ದಾರೆ. ಇನ್ನು, ಚಿತ್ರಕ್ಕೆ “ಟಗರು’ ಖ್ಯಾತಿಯ ಕಾನ್‌ಸ್ಟೆಬಲ್‌ ಸರೋಜ ಎಂದೇ ಹೆಸರಾದ ತ್ರಿವೇಣಿರಾವ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ “ಪದ್ಯಂ’ ಎಂದು ಹೆಸರಿಡಲಾಗಿದೆ ಎಂಬುದು ನರೇಂದ್ರಬಾಬು ಮಾತು.

ಅಂದಹಾಗೆ, ತೆಲುಗಿನ ತ್ರಿಪುರನೇನಿ ಗೋಪಿಚಂದ್‌ ಬರೆದಿರುವ “ಮೆರುಪುಲ ಮರಕಲು’ ಕಾದಂಬರಿ ಚಿತ್ರವಾಗುತ್ತಿದ್ದು, ಈ ಚಿತ್ರಕ್ಕೆ ವಿಜಯವಾಡ ಮೂಲದ ಉದ್ಯಮಿ ನಿರ್ಮಾಪಕರು. ಚಿತ್ರಕ್ಕೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರಕ್ಕೆ ಕೆಲಸ ಮಾಡಿದ್ದ ಲವ್‌ಮೆಹ್ತಾ ಅವರು ಸಂಗೀತ ನೀಡಿದ್ದಾರೆ.

ಅಶ್ವಿ‌ನ್‌ ಛಾಯಾಗ್ರಹಣವಿದೆ. ಹರೀಶ್‌ ಸಂಕಲನ ಮಾಡಲಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳಿಗೆ ನಿರ್ದೇಶಕ ನರೇಂದ್ರಬಾಬು ಅವರು ಗೀತೆ ರಚಿಸಿದ್ದಾರೆ. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕೆಲಸ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next