Advertisement
ಈ ಕೂಟದಲ್ಲಿ ಭಾರತದ ಏಕೈಕ ಸೋಲು ಲೀಗ್‌ನಲ್ಲಿ ಚೀನ ವಿರುದ್ಧವೇ ಎದುರಾಗಿತ್ತು. ಫೈನಲ್‌ನಲ್ಲಿ ಚೀನವನ್ನೇ ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ನಿಗದಿತ ಅವಧಿಯಲ್ಲಿ ಪಂದ್ಯ 1-1ರಿಂದ ಸಮನಾದ ಕಾರಣ ಫಲಿತಾಂಶ ನಿರ್ಧರಿಸಲು ಶೂಟೌಟ್ ಅಳವಡಿಸಲಾಯಿತು. ಭಾರತವಿಲ್ಲಿ 3-2 ಅಂತರದ ಮೇಲುಗೈ ಸಾಧಿಸಿತು. ಗೋಲ್‌ಕೀಪರ್ ನಿಧಿ 3 ಪೆನಾಲ್ಟಿ ಹೊಡೆತಗಳನ್ನು ತಡೆದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ವಿಜೇತ ತಂಡದ ಪ್ರತಿಯೋರ್ವ ಆಟಗಾರ್ತಿಗೆ “ಹಾಕಿ ಇಂಡಿಯಾ’ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.