ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಿದ್ದ ಸಂದರ್ಭಗಳು ನನಗೆ ಸ್ವಲ್ಪ ಮಟ್ಟಿಗೆ ನೆನಪಿದೆ. ಅಜ್ಜನ ಸಾಹಸಗಾಥೆ ಸೇರಿದಂತೆ ಅಜ್ಜಿಯ ಬತ್ತಳಿಕೆಯಲ್ಲಿದ್ದ ಬತ್ತದಷ್ಟು ಕಥೆಗಳು ಒಂದರ ಹಿಂದೆ ಮತ್ತೂಂದರಂತೆ ಅವರ ಹೊರ ಬರುತ್ತಿದ್ದನ್ನು ನಾವು ನೋಡಿದ್ದೇವೆ.
ಎಲ್ಲೋ ಒಂದು ಕಡೆ ಈ ಮೊಬೈಲ್ ಫೋನ್‌ಗಳು ಮಕ್ಕಳಿಂದ ಕಥೆಗಳನ್ನು ಕೇಳಿಸಿಕೊಳ್ಳುವ ವ್ಯವಧಾನವನ್ನು ದೂರ ಮಾಡಿದೆ. ತಾಯಿ, ತಂದೆ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಣ್ಣ, ತಂಗಿ ಇಂತಹ ಸಂಬಂಧ ಗಳೆಲ್ಲವೂ ಅಜ್ಜಿ ಕಾಲದ ಕಥೆಯನ್ನು ಆಲಿಸಿ ಬೆಳದದ್ದು. ಅಜ್ಜಿ ಕಥೆ ಹೇಳುತ್ತಾಳೆ ಎಂಬ ಕಾರಣಕ್ಕೆ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗೋಣ ಎನ್ನುತ್ತಾ ಅಪ್ಪ ಅಮ್ಮನನ್ನು ಕಾಡುತ್ತಿದ್ದ ಮಕ್ಕಳನ್ನು ಕೂಡ ನಾವು ಕಾಣಬಹುದು.
ಆದರೆ ಕಥೆಯನ್ನು ಹೇಳುತ್ತಿದ್ದ ಅಜ್ಜಿ ಈಗ ಮನೆಯ ಮೂಲೆಯೊಂದರ ಖಾಯಂ ಅತಿಥಿ ಎಲ್ಲರೂ ಈಗ ಫೇಸ್ ಬುಕ್, ವಾಟ್ಸಪ್ ಅನ್ನು ಪ್ರಪಂಚ ಎಂದು ನಂಬಿ ಆ ಲೋಕದೊಳಗೆ ಮುಳುಗಿ ಹೋಗಿದ್ದಾರೆ. ಇದೆಲ್ಲವನ್ನು ನೋಡುತ್ತಾ ಹೋಗುತ್ತಿದ್ದರೆ ಅಜ್ಜಿ ಜೊತೆ ಕೈ ತುತ್ತು ತಿಂದು ಕೇಳುತ್ತಿದ್ದ ಕಥೆಗಳೆಲ್ಲವೂ ನಮ್ಮ ಮುಂದೆ ಬಂದುಬಿಡುತ್ತದೆ.
ಹಾಗೆಯೇ ಕಥೆ ಕೇಳುವವರ ಸಂಖ್ಯೆ ಕಡಿಮೆ ಆಗುತ್ತಾ ಬಂದಂತೆ ಕಥೆ ಹೇಳುವವರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. ಆಗ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಮಕ್ಕಳು ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದರು ಆದರೆ ಈಗ ಆ ರೀತಿಯಾಗಿಲ್ಲ ಏನೇ ಬೇಕೆಂದರೂ ಈ ಇಂಟರ್ನೆಟ್ ಅನ್ನು ಕೇಳುತ್ತಿರುವುದು ನೋಡಬಹುದು.
ಎಂತಹ ಕ್ಷಣಗಳನ್ನು ನಾವೆಲ್ಲ ಕಳೆದುಕೊಂಡಿದ್ದೇವೆ ಎಂದರೆ ಈಗ ಗಳಿಸುತ್ತಿರುವುದು ಕ್ಷಣಿಕ ಸುಖವನ್ನು ಕಳೆದುಕೊಂಡದ್ದು ಮರಳಿ ಎಂದು ಬಾರದ ಅದ್ಭುತ ಕ್ಷಣವನ್ನು ಎಂದು ಹೇಳಬಹುದು.
ರಂಜಿತಾ ಹೆಚ್. ಕೆ. ಹಾಸನ