Advertisement
ರಸ್ತೆ ಬದಿ ಚರಂಡಿ ಸಮರ್ಪಕವಾಗಿರದೆ ಮಳೆ ಬರುವಾಗ ಗುಂಡಿಗಳಲ್ಲಿ ನೀರು ತುಂಬಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರಿಗೆ ತಿಳಿಯದೆ ಅಪಘಾತಗಳು ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವಂತಾಗಿತ್ತು. ಘನ ವಾಹನಗಳು ಕೂಡಾ ಮುಖ್ಯ ರಸ್ತೆಯಲ್ಲಿ ಚಲಿಸುವಾಗ ಗುಂಡಿ ತಪ್ಪಿಸಲು ಹೆಣಗಾಡುತ್ತಿದ್ದು, ಗುಂಡಿ ಮುಚ್ಚುವ ಕಾಮಗಾರಿ ನಡೆಯದೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗಿತ್ತು.
ಆರೇಳು ವರ್ಷಗಳ ಹಿಂದೆ ವಿಸ್ತರಣೆ ಗೊಂಡಿದ್ದ ಆತ್ರಾಡಿ ಶಿರ್ವ ಬಜ್ಪೆ ರಾಜ್ಯ ಹೆದ್ದಾರಿಯ ನ್ಯಾರ್ಮ, ತುಂಡುಬಲ್ಲೆ -ಗುರುಂಜ ಮತ್ತು ಪಿಲಾರಕಾನ ಬಳಿ ಮಳೆಗೆ ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡ ಗುಂಡಿ ಗಳು ನಿರ್ಮಾಣಗೊಂಡು ಸಂಚಾರ ದುಸ್ತರ ಗೊಂಡ ಬಗ್ಗೆ ಡಿ. 7 ರಂದು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ವರದಿಗೆ ಕೂಡಲೇ ಸ್ಪಂದಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ರಸ್ತೆಯನ್ನು ಸರಿಪಡಿಸಲು ಶನಿವಾರವೇ ಕಾರ್ಯಪ್ರವೃತ್ತರಾಗಿದ್ದು, ನಾಗರಿಕರು/ ವಾಹನಸವಾರರು ನಿಟ್ಟುಸಿರು ಬಿಡುವಂತಾಗಿದೆ.