ದೊಡ್ಡಬಳ್ಳಾಪುರ: ಸಂಗೀತದಿಂದ ಹಲವಾರು ಪ್ರಯೋಜನಗಳಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಅಚ್ಚರಿಯೆನಿಸುವ ಸಂಗತಿಗಳು ನಡೆದಿವೆ. ಸಂಗೀತವನ್ನು ಸ್ಪರ್ಧೆಗಳಿಗೆ ಸೀಮಿತಗೊಳಿಸದೇ ಸದಾ ಆಸ್ವಾದಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಿದುಷಿ ಶಾರದಾಶ್ರೀಧರ್ ತಿಳಿಸಿದರು. ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಶಾಲಾ ಸಭಾಂಗಣದಲ್ಲಿ ನಡೆದ ಸುಸ್ವರ ಸಂಸ್ಥೆಯ 20ನೇ ವಾರ್ಷಿಕೋತ್ಸವ ಹಾಗೂ ಶ್ರೀ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವದ ಸಮಾರೋಪದಲ್ಲಿ ಉಪನ್ಯಾಸ ನೀಡಿದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಕೋಮಾ ಸ್ಥಿತಿಯಲ್ಲಿ ದ್ದಗ, ಬಾಲಮುರಳಿ ಕೃಷ್ಣ ಅವರು ಸಂಗೀತದಿಂದ ಕೋಮಾ ಸ್ಥಿ ತಿ ಯಿಂದ ಹೊರತಂದಿದ್ದ ಘಟನೆ ಸಂಗೀತಕ್ಕಿರುವ ಶಕ್ತಿಯನ್ನು ನಿರೂಪಿಸುತ್ತದೆ. ಸಂಗೀತ ಮಾನಸಿಕ ಸದೃಢತೆಗೆ ಸಹ ಕಾ ರಿ ಎಂದು ಹೇಳಿದರು.
ಸಂಗೀತ ಕ್ಷೇತ್ರಕ್ಕೆ ಪುರಂದರದಾಸರ ಕೊಡುಗೆಯನ್ನು ಕೀ ರ್ತನೆಗಳ ಮೂಲಕ ವಿವರಿಸಿದ ಅವರು, ಜನಸಾಮಾನ್ಯರಿಂದ ದೂರವಾಗುತ್ತಿದ್ದ ಶಾಸ್ತ್ರೀಯ ಸಂಗೀತವನ್ನು ಸರಳೀಕರಿಸುವ ಮೂಲಕ ಕರ್ನಾಟಕ ಸಂಗೀತಕ್ಕೆ ಹೊಸ ಆಯಾಮವನ್ನು ನೀಡಿದ ದಾಸಶ್ರೇಷ್ಠ ಪುರಂದರ ದಾಸರ ಕೊಡುಗೆಯನ್ನು ನಾವು ಸದಾ ಸ್ಮರಿಸಬೇಕಿದೆ. ಸಾ ಹಿತ್ಯ, ಸಂಗೀತ, ಸಂಸ್ಕಾರ ನೀ ಡಿ ರುವ ಪುರಂದರದಾಸರ 4.5 ಲಕ್ಷ ಕೃ ತಿ ಗ ಳಲ್ಲಿ ನ ಮಗೆ ದೊ ರೆ ತಿ ರು ವುದು 10 ಸಾ ವಿರ ಕೃ ತಿ ಗಳು ಮಾತ್ರ.
ಸ್ವರ, ಲಯ, ಭಾವಗಳ ಆಧಾರದ ಮೇಲೆ ಸಂಗೀತದ ಬುನಾದಿ ನಿಂತಿದ್ದು, ನವವಿಧ ಭಕ್ತಿಯ ಮೇಲೆ ಕೀರ್ತನೆಗಳನ್ನು ರಚಿಸಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪುರಂದರದಾಸರು ಕ ರ್ನಾ ಟಕ ಸಂಗೀತ ಪಿ ತಾ ಮಹ ಎನಿಸಿಕೊಂಡಿದ್ದಾರೆ. ಅ ವರ ಕೀರ್ತನೆಗಳಲ್ಲಿ ಬದುಕಿನ ಅರ್ಥ, ನವವಿಧ ಭಕ್ತಿ, ಮೋಕ್ಷ ಮಾರ್ಗ, ನೀತಿ ಅಡಗಿದೆ ಎಂದರು.
ಸುಸ್ವರದ ಅಧ್ಯಕ್ಷ ಎ.ಆರ್. ನಾಗರಾಜನ್ ಅಧ್ಯಕ್ಷತೆ ವಹಿಸಿ ಮಾ ತ ನಾ ಡಿ, ಪರೀಕ್ಷೆಗಳಿಗಾಗಿ ಸಂಗೀತ ಕಲಿಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಸಂಗೀತಕ್ಕೆ ಅರ್ಪಣಾ ಮನೋಭಾವ ಬೇಕಿದ್ದು, ಕಲಿಕೆ ನಿರಂತರವಾಗಿರಬೇಕು. ಸುಸ್ವರ ಇಂದು ಪ್ರತಿ ಎರಡು ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಸಹೃದಯರಿಗೆ ಸಂಗೀತದಲ್ಲಿ ಒಲವು ಮೂಡುವಂತೆ ಮಾಡಬೇಕಿದೆ ಎಂದರು.