Advertisement

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

05:55 PM Apr 20, 2024 | Team Udayavani |

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜನರು ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗ ವಹಿಸಬೇಕು ಎನ್ನುವ ಜಾಗೃತಿಯನ್ನು ಮೂಡಿಸಲು ಆರೋಗ್ಯ ಇಲಾಖೆಯು ಸಲಹಾ ಚೀಟಿಗಳಲ್ಲಿ ” ಧ್ಯೇಯ ವ್ಯಾಕ್ಯ’ಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

Advertisement

ಮೈಸೂರು ಜಿಲ್ಲಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ನೀಡುವ ಹೊರರೋಗಿ ಚೀಟಿ, ಸಲಹಾ ಚೀಟಿಗಳಲ್ಲಿ “ಚುನಾವಣಾ ಪರ್ವ ದೇಶದ ಗರ್ವ’ ಮತದಾನಕ್ಕಿಂತ ಇನ್ನೊಂದಿಲ್ಲ , ನಾನು ಖಚಿತವಾಗಿ ಮತದಾನ ಮಾಡುವೆ, “ಏ.26ರಂದು ನಮ್ಮ ನಡಿಗೆ ಮತದಾನ ಕೇಂದ್ರದ ಕಡೆಗೆ’ಎನ್ನುವ ಧ್ಯೇಯ ವ್ಯಾಕ್ಯಗಳನ್ನು ಮುದ್ರಿಸಲಾಗಿದೆ.

ಇದಲ್ಲದೇ ಒಳರೋಗಿಯಾಗಿ ದಾಖಲಾಗುವವರ ಕೇಸ್‌ ಸೀಟ್‌ನಲ್ಲೂ ಕೂಡಾ ಮುದ್ರಿಸಲಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಶುರುವಾದ ದಿನದಿಂದಲೂ ಆರೋಗ್ಯ ಇಲಾಖೆಯು ತಾನು ನಿರ್ವಹಿಸುವ ಪತ್ರ ವ್ಯವಹಾರಗಳು, ಕಡತಗಳು, ಲೆಟರ್‌ ಹೆಡ್‌ಗಳಲ್ಲೂ ಕೂಡಾ ಧ್ಯೇಯ ವ್ಯಾಕ್ಯವನ್ನು ಮುದ್ರಿಸಲಾಗಿದ್ದೂ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ.

ಸಮಿತಿ ಮೂಲಕ ಜಾಗೃತಿ: ಮೈಸೂರು ಜಿಲ್ಲೆಯಲ್ಲಿ 926 ಗ್ರಾಮೀಣಾ ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕತಾ ಸಮಿತಿಗಳು ಇವೆ. ಈ ಸಮಿತಿಯಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇರುತ್ತಾರೆ. ಇವರು ಕಾಲ-ಕಾಲಕ್ಕೆ ಗುಂಪು ಸಭೆಗಳನ್ನು ನಡೆಸಿ ಜನರಿಗೆ ಆರೋಗ್ಯದ ಅರಿವು ಮೂಡಿಸುತ್ತಾರೆ. ಪ್ರಸ್ತುತ ಚುನಾವಣಾ ಸಮಯವಾಗಿರುವುದರಿಂದ ಈಗ ನಡೆಸುವ ಗುಂಪು ಸಭೆಗಳಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮತದಾನ ಏಕೆ ಮಾಡಬೇಕು. ಸರ್ಕಾರಗಳು ಹೇಗೆ ರಚನೆಯಾಗುತ್ತವೆ. ಆಮಿಷ ಗಳಿಗೆ ಒಳಗಾಗಿ ಮತದಾನ ಮಾಡಿದರೇ ಮುಂದಿನ ಪರಿಣಾಮಗಳು ಹೇಗೆ ಇರುತ್ತವೆ ಎನ್ನುವುದನ್ನು ಜನರಿಗೆ ತಿಳಿಯುವಂತೆ ಹೇಳಾಗುತ್ತಿದೆ. ಈ ಸಭೆಗಳಲ್ಲಿ ಆಯಾ ಗ್ರಾಮದಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಯುವಕ-ಯುವತಿ ಅಥವಾ ವಿಚಾರಗಳ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳಿಂದ ಮತದಾನ ಕುರಿತು ಸಣ್ಣ ಭಾಷಣಗಳನ್ನು ಮಾಡಿಸುವ ಮೂಲಕ ಜನರನ್ನು ಜಾಗೃತಗೊಳಿಸಲಾಗುತ್ತಿದೆ.

ಹಳ್ಳಿ-ಹಳ್ಳಿಗಳಿಗೆ ತೆರಳಿ ಜಾಗೃತಿ: ಜಿಲ್ಲೆಯಲ್ಲಿ ತೀವ್ರತರನಾದ ಉಷ್ಣಾಂಶವಿರುವುದರಿಂದ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಮನೆ-ಮನೆಗೆ ಭೇಟಿ ನೀಡಿ, ಜನರ ಆರೋಗ್ಯದ ಮೇಲ್ವಿಚಾರಣೆ ಮಾಡ ಲಾಗುತ್ತಿದೆ. ಬೇಸಿಗೆಯಾದ್ದರಿಂದ ಆಹಾರ ಪದಾರ್ಥ ಗಳು ಬೇಗನೆ ಹಳಸಿಹೋಗುತ್ತವೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಆಹಾರವನ್ನು ಸಿದ್ಧಪಡಿಸಿ ಕೊಂಡು, ಬಿಸಿ-ಬಿಸಿಯಾಗೇ ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹೊರಗಡೆ ಆಹಾರವನ್ನು ಅದಷ್ಟು ಮಟ್ಟಿಗೆ ದೂರವಿಡಬೇಕು. ಬಿಸಲಾಘಾತದಿಂದ ತಪ್ಪಿಸಿಕೊಳ್ಳಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸುವ ಜತೆಯಲ್ಲೇ ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

Advertisement

ಮೆಡಿಕಲ್‌ ಕಿಟ್‌ ವಿತರಣೆ : ಮತದಾನ ನಡೆಯುವ ಪ್ರತಿಯೊಂದು ಕೇಂದ್ರ ಗಳಿಗೂ ತುರ್ತು ಅಗತ್ಯವಿರುವ ಔಷಧಿಗಳನ್ನು ಒಳಗೊಂಡಿರುವ ಮೆಡಿಕಲ್‌ ಕಿಟ್‌ಅನ್ನು ನೀಡ ಲಾಗುತ್ತದೆ. ಅದರಲ್ಲಿ ಒಆರ್‌ಎಸ್‌ ದ್ರಾವಣದ ಪೊಟ್ಟಣ, ಅಗತ್ಯ ಮಾತ್ರೆಗಳು, ಕೆಲವು ಲಸಿಕೆ ಗಳು ಇರುತ್ತವೆ. ಚುನಾವಣಾ ಕಾರ್ಯಕ್ಕೆ ನಿಯೋ ಜನೆ ಗೊಂಡ ಸಿಬ್ಬಂದಿಗೆ ಅಥವಾ ಮತದಾನ ಮಾಡಲು ಹೋಗುವ ಜನರಿಗೆ ದಿಢೀರನೇ ಆರೋಗ್ಯದಲ್ಲಿ ಏರುಪೇರು ಆದರೆ ಪ್ರಾಥಮಿಕ ವಾಗಿ ಬೇಕಾಗಿರುವ ಔಷಧಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸದಲ್ಲಿ ಭಾಗಿ ಯಾಗಿರುವುದು ನಮಗೆ ಹೆಮ್ಮೆ ಎನಿಸು ತ್ತಿದೆ. ಈ ರೀತಿ ಜಾಗೃತಿ ಕಾರ್ಯಕ್ರಮವನ್ನು ಮಾಡುವ ಮೂಲಕ ಚುನಾವಣೆಯ ಹಬ್ಬದ ಸಂಭ್ರಮದಲ್ಲಿ ಆರೋಗ್ಯ ಇಲಾಖೆಯು ಪಾಲ್ಗೊಳ್ಳುತ್ತಿದೆ. ಡಾ.ಪಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ

 ಆರ್‌.ವೀರೇಂದ್ರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next