Advertisement

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

12:25 AM May 02, 2024 | Team Udayavani |

ಮಂಗಳೂರು: ಅಡ್ಯಾರಿನ ಎಳನೀರು ಫ್ಯಾಕ್ಟರಿ ಯಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಯೋಗಾಲಯದ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಎಳನೀ ರಿನಲ್ಲಿ ಯಾವುದೇ ಅಪಾಯಕಾರಿ ಅಂಶ ಇರಲಿಲ್ಲ ಎಂದು ತಿಳಿಸಲಾಗಿದೆ.

Advertisement

ಎ. 9ರಂದು ಎಳನೀರು ಕುಡಿದವರಲ್ಲಿ ಹೆಚ್ಚಿನ ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡಿತ್ತು. ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಸ್ವಸ್ಥರಾದವರ ಮಲ ಮತ್ತು ಮೂತ್ರ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಂದ ವರದಿಯಲ್ಲಿ ಅವರ ದೇಹದಲ್ಲಿ ಬ್ಯಾಕ್ಟಿರಿಯಾ ಇದ್ದಿರುವುದು ಕಂಡು ಬಂದಿದೆ. ಈ ಪ್ರಕರಣ ಬೆಳಕಿಗೆ ಬಂದ ಎರಡು ದಿನಗಳ ಬಳಿಕ ಆರೋಗ್ಯ ಇಲಾಖೆಗೆ ಮಾಹಿತಿ ದೊರಕಿದ್ದು, ಎಳನೀರು ಫ್ಯಾಕ್ಟರಿಗೆ ಇಲಾಖೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ತಾತ್ಕಾಲಿಕವಾಗಿ ಫ್ಯಾಕ್ಟರಿ ಮುಚ್ಚಲು ಆದೇಶ ಮಾಡಲಾಗಿತ್ತು.

ಎಳನೀರು ಸ್ಯಾಂಪಲ್‌ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಅಪಾಯಕಾರಿ ಅಂಶ ಇಲ್ಲ ಎಂದು ಉಲ್ಲೇಖ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next