ಶಿರಸಿ: ಧರ್ಮದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮದಲ್ಲಿ ನಡೆಯಲು ಗುರುವಿನ ಉಪದೇಶ ಪಡೆದು ಮುನ್ನಡೆಯಬೇಕು ಎಂದು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ನುಡಿದರು.
Advertisement
ಗುರುವಾರ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಆಶೀರ್ವಚನ ನೀಡಿದರು. ಜೀವನ-ಬದುಕು ನಡೆಸುವುದು ಎಂದರೆ ಪ್ರಾಣಿಗಳೂ ಜೀವನ ಮಾಡುತ್ತವೆ. ಆದರೆ ಮನುಷ್ಯ ಅದಕ್ಕಿಂತ ಬೇರೆಯಾಗಿದ್ದಾನೆ. ಮನುಷ್ಯ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆಗ ಈ ಜನ್ಮಸಾರ್ಥಕ ಆಗುತ್ತದೆ. ಧರ್ಮಾಚರಣೆಯಿಂದ ಇದು ಸಾಧ್ಯ. ಪರಂಪರೆಯ ಗುರುಗಳಿಂದ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯ ನಡೆದಿದೆ ಎಂದರು.
Related Articles
ಅನುಭವ ಜೀವನದಲ್ಲಿ ಮುಖ್ಯ. ಧರ್ಮದ ಅನುಭವ ಹೇಳುವಾಗಲೂ ಅದನ್ನೇ ಹೇಳುವರು. ಅಂತರಾತ್ಮಕ್ಕೆ ತೃಪ್ತಿ ಆದರೆ
ಆನಂದದ ಅನುಭವ ಬರುತ್ತದೆ. ಆನಂದದ ಅನುಭವ ಆಗಬೇಕಾದರೆ ಸಂತುಷ್ಟಿಯಿಂದ ಆತ್ಮ ಸಾಕ್ಷಿಯಾಗಬೇಕು. ಅದೇ ಧರ್ಮ.
ಶೃಂಗೇರಿ ಜಗದ್ಗುರುಗಳು ಶ್ರೀ ಮಠಕ್ಕೆ ಆಗಮಿಸಿದ್ದು ಆನಂದ ಉಂಟಾಗಿದೆ ಎಂದರಲ್ಲದೇ ಮಠದಲ್ಲಿ ನಡೆದ ಶಿಷ್ಯ ಸ್ವೀಕಾರದ ಅನುಭವ ಹಂಚಿಕೊಂಡರು. ಶ್ರೀ ಆನಂದಬೋಧೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪಾದಪೂಜೆ ನೆರವೇರಿಸಿದರು.
Advertisement
ಕಾರ್ಯದರ್ಶಿ ಗಣಪತಿ ಹೆಗಡೆ ಗೊಡವೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು. ರಾಜರಾಜೇಶ್ವರಿ ಸಂಸ್ಕೃತಮಹಾ ವಿದ್ಯಾಲಯದ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು. ವಸಂತವೇದ ಶಿಭಿರಾರ್ಥಿಗಳು, ಭಕ್ತರು-ಶಿಷ್ಯರು
ಭಾಗವಹಿಸಿದ್ದರು. ಕಿರುಕುಂಭತ್ತಿ ಮಹಾಬಲೇಶ್ವರ ಭಟ್ಟ ನಿರ್ವಹಿಸಿದರು. ಮಾತೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಗುರುವಿನ ಮಾರ್ಗವನ್ನು ಶ್ರದ್ಧೆಯಿಂದ ಪಾಲಿಸಬೇಕು. ಗುರುವಿನ ಎದುರು ಶಿಷ್ಯರು ಶಿಷ್ಯರಾಗಿಯೇ ಇರಬೇಕು.
* ವಿಧುಶೇಖರ ಶ್ರೀ