Advertisement
ಜೀವನ ಶೈಲಿ ಎಂಬುದು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬಟ್ಟೆ, ಹೊಸ ಹೊಸ ಮಾತು, ಹೊಸ ತಿಂಡಿಗಳು, ಈ ರೀತಿಯಿಂದಾಗಿ ಆರೋಗ್ಯಕರ ಜೀವನ ಶೈಲಿಯನ್ನು ಮರೆಯುತ್ತಿದ್ದೇವೆ.
Related Articles
Advertisement
ನಮ್ಮ ಮನೆಯವರ ಜತೆ ಕ್ಷಣ ಕಳೆಯುವುದಿಲ್ಲ. ಮನೆ ಮಂದಿ ಸೇರಿ ಜತೆಗೂಡಿ ಊಟ ಮಾಡುವುದೂ ಇಲ್ಲ. ಈಗ ಹೇಗಾಗಿದೆ ಎಂದರೆ ಒಟ್ಟಿಗೆ ಕೂತುಕೊಂಡು ಊಟಕ್ಕೆ ಕರೆದರೂ ಹೋಗದಂತ ಪರಿಸ್ಥಿತಿ ಈ ಮೊಬೈಲ್ ಮಾಡಿಬಿಟ್ಟಿದೆ. ಇವಾಗ ಒಬ್ಬರೊಬ್ಬರ ಊಟದ ಸಮಯ ಬೇರೆ ಬೇರೆ ಆಗಿದೆ. ಹಾಗಾಗಿ ಈಗೀಗ ಎಲ್ಲರಲ್ಲಿಯೂ ಸಾಮರಸ್ಯದ ಜೀವನ ಕಡಿಮೆಯಾಗುತ್ತದೆ. ಅರ್ಥ ಮಾಡಿಕೊಳ್ಳುತ್ತಿಲ್ಲ. ಇದು ನಮ್ಮ ಆರೋಗ್ಯಕರ ಜೀವನ ಶೈಲಿ ಅಲ್ಲ. ಇದು ನಮ್ಮ ಅನಾರೋಗ್ಯ ಜೀವನ ಶೈಲಿಯಾಗಿದೆ.
ನಾವು ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ಈ ರೀತಿಯ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಕಳೆದುಕೊಳ್ಳಬಾರದು. ನಮ್ಮ ದಿನದ ಸಮಯವನ್ನು ಹೊಸ ಹೊಸ ವಿಚಾರದ ಬಗ್ಗೆ ತಿಳಿಯಲು ಶುರು ಮಾಡಬೇಕು. ಹಾಗೆಯೇ ಒಳ್ಳೆಯ ಆಹಾರ ಕ್ರಮಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ರೂಪಿಸಿಕೊಳ್ಳಬೇಕು. ಹಾಗೆಯೇ ಪ್ರಕೃತಿಯ ಜತೆ ಒಡನಾಟ ಮಾಡಬೇಕು.
ಆರೋಗ್ಯಕರವಾಗಿರಲು ನಮ್ಮ ನಮ್ಮ ಮನೆಯವರ ಜತೆ ಒಳ್ಳೆಯ ಕ್ಷಣಗಳನ್ನು ಕಳೆಯಬೇಕು. ಮನೆಯವರ ಜತೆ ಕಷ್ಟ ಸುಖ ಹಂಚಿಕೊಳ್ಳಬೇಕು. ಹಾಗೆಯೇ ಮನೋರಂಜನೆಯಿಂದ ಕೂಡಿರಬೇಕು. ಈ ರೀತಿಯಾದಂತಹ ಸಂಸ್ಕೃತಿ ಎಂಬುದು ಹಳ್ಳಿಗಳಲ್ಲಿ ಸ್ವಲ್ಪವಾದರೂ ಉಳಿದುಕೊಂಡಿದೆ. ಆದರೆ ಈಗಲೂ ಕೆಲವರು ಈ ಸಂಸ್ಕೃತಿಗಳನ್ನು ಮರೆತು ಆಧುನಿಕರಾಗಲು ಹೋಗುತ್ತಿದ್ದಾರೆ. ಆದರೆ ಆಧುನಿಕರಾಗಬೇಕು ನಮ್ಮ ಸಂಸ್ಕೃತಿ ಸಂಪ್ರದಾಯ ಜೀವನ ಶೈಲಿಗಳನ್ನು ತೊರೆದು ಅಲ್ಲ. ಈ ರೀತಿಯಾದ ಸುಂದರ ಭಾವನೆಗಳನ್ನು ಮರೆತು ಅಲ್ಲ.
ನಮ್ಮ ಜೀವನವನ್ನು ಆರೋಗ್ಯಕರವಾಗಿ. ನಮ್ಮಿಂದಲೇ ಸಾಧ್ಯವಿದೆ. ಅದನ್ನು ಬಿಟ್ಟು ನಾವು ಬೇರೆ ಎಲ್ಲಿ ಹುಡುಕಬಾರದು. ನಮ್ಮ ದಿನಾಚರಣೆಯನ್ನು ಸ್ವಲ್ಪವಾದರೂ ಬದಲಾಯಿಸಿಕೊಳ್ಳಬೇಕು. ಯಾವಾಗಲೂ ಒಂದೇ ರೀತಿಯಿಂದ ಬದುಕದೆ ನಮ್ಮಲ್ಲಿ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಅಂದರೆ ಆಡುವುದು, ಬರೆಯುವುದು, ಪುಸ್ತಕ ಓದುವುದು, ಮನೆಯವರ ಜತೆ ಕ್ಷಣ ಕಳೆಯುವುದರಿಂದ ನಮ್ಮ ಜೀವನ ಶೈಲಿ ಎಂಬುದು ಅದ್ಭುತ ವಾಗಿರುತ್ತದೆ.
ಲೈಫ್ ಸ್ಟೈಲ್ ಎನ್ನುವಂತದು ದಿನೇ ದಿನೇ ಬದಲಾಗುತ್ತಾ ಹೋಗುತ್ತಿದೆ. ಪ್ರತೀ ದಿನ ಬದಲಾವಣೆಯಾಗುತ್ತಿದೆ. ಈಗಿನ ಕಾಲದಲ್ಲಿ ಬದಲಾವಣೆಯಾಗಬೇಕು, ಆದರೆ ನಾವು ನಡೆದು ಬಂದ ಹಾದಿಯನ್ನು ಮರೆಯಬಾರದಲ್ಲವೇ.
ಉದಾಹರಣೆಗೆ ಒಂದು ಮರ ಬೆಳೆದು ನಿಂತ ಮೇಲೆ ತನ್ನ ಬೇರನ್ನೇ ಮರೆತರೆ ಆ ಮರ ಉಳಿಯುಲು ಸಾಧ್ಯವಿಲ್ಲ. ಹಾಗೆಯೇ ನಾವು ಪೇಟೆಯಲ್ಲಿದ್ದ ಮಾತ್ರಕ್ಕೆ ಹಳ್ಳಿಯ ಜೀವನವನ್ನು ಮರೆಯೋದು ಸರಿಯೇ. ಅಲ್ಲಿ ಕಳೆದ ಕ್ಷಣಗಳನ್ನು ಪೇಟೆಯಲಿದ್ದಾಗ ನೆನಪಿಸಿಕೊಂಡಾದರೂ ಅನುಭವವನ್ನು ಮೆಲುಕು ಹಾಕುತ್ತಿರಬೇಕು. ಹಳ್ಳಿಯ ಲೈಫ್ ಹಳ್ಳಿಯಲ್ಲಿ ಬದುಕುವುದೇ ಒಂದು ಮಜಾ.
–ಪ್ರತೀಕ್ಷಾ ರಾವ್ ಶಿರ್ಲಾಲ್
ಎಂಪಿಎಂ, ಸರಕಾರಿ ಪ್ರ.ದ. ಕಾಲೇಜು ಕಾರ್ಕಳ