Advertisement
ಟ್ಯಾಂಕರ್‌ನಿಂದ ನೀರು ಪೂರೈಕೆ ಅಸಮರ್ಪಕ: ನಗರಕ್ಕೆ ಈ ಹಿಂದೆ ಪಂಪ್ ಹೌಸ್‌ನಿಂದ ಪೂರೈಕೆಯಾಗುತ್ತಿದ್ದ ಲಕ್ಷ್ಮಣತೀರ್ಥ ನದಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ಸ್ಥಗಿತಗೊಳಿಸಿ, ಕಾವೇರಿಯ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಎಲ್ಲಿಯೋ ನಲ್ಲಿ ನೀರಿನ ಪೈಪಿಗೆ ಒಳಚರಂಡಿ ನೀರು ಸೇರುತ್ತಿರುವುದರಿಂದ ಪೂರೈಕೆಯಾಗುವ ನೀರಿನಲ್ಲಿ ಕಲ್ಲು, ಪಾಚಿ, ದುರ್ವಾಸನೆ ಭರಿತ ಗಲೀಜು ನೀರು ಸರಬರಾಜಾಗುತ್ತಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.
Related Articles
Advertisement
ಆರೋಗ್ಯ ಇಲಾಖೆ ಪರಿಶೀಲನೆ, ಸೂಚನೆ: ಅಶುದ್ಧ ನೀರು ಪೂರೈಕೆಯಾಗುತ್ತಿದ್ದ ಬಡಾವಣೆ ಅನೇಕ ಮಂದಿಗೆ ಕಾಯಿಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ಭೇಟಿ ಇತ್ತು ಪರಿಶೀಲಿಸಿದ ವೇಳೆ ಇಲ್ಲಿಗೆ ಪೂರೈಕೆಯಾಗುತ್ತಿರುವ ನೀರಿನ ಮಾದರಿ ಸಂಗ್ರಹಿಸಿದ್ದು, ಪ್ರಯೋಗಾಲಯದ ವರದಿಯಂತೆ ಬಳಸಲು ಯೋಗ್ಯವಿಲ್ಲ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಕ್ಲೋರಿನೇಷನ್ ಮಾಡಬೇಕು, ವಾಲ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಸುತ್ತ ಶುಚಿತ್ವ ಕಾಪಾಡಬೇಕು, ಒಡೆದಿರುವ ಪೈಪ್‌ಗ್ಳನ್ನು ದುರಸ್ಥಿಗೊಳಿಸಿದ ನಂತರವೇ ನೀರು ಸರಬರಾಜಿಗೆ ಕ್ರಮವಹಿಸುವಂತೆ ಆರೋಗ್ಯಇಲಾಖೆಯು ಜಿಲ್ಲಾಕಾರಿ ಸೇರಿದಂತೆ ಸಂಬಂ—ತ ಇಲಾಖೆಗಳಿಗೆ ಪತ್ರಬರೆದಿದ್ದಾರೆ.
ನಾಳೆ ಪ್ರತಿಭಟನೆ: ಕಲುಷಿತ ನೀರು ಸರಬರಾಗುತ್ತಿದ್ದರೂ ಪೌರಾಯುಕ್ತರು ಕ್ರಮವಹಿಸದಿರುವ ಬಗ್ಗೆ ಬಡಾವಣೆ ನಿವಾಸಿಗಳು ಬುಧವಾರ ನಗರಸಭೆ ಎದುರು ಖಾಲಿ ಬಿಂದಿಗೆ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಬಡಾವಣೆ ಮುಖಂಡರು ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರುತ್ತಿರವುದನ್ನು ಪತ್ತೆಹಚ್ಚಲು ನಗರಸಭೆ ವಿಫಲವಾಗಿದೆ. ಜತೆಗೆ ಟ್ಯಾಂಕರ್‌ಗಳಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪ್ರಶ್ನಿಸಲು ಶಾಸಕರಾಗಲಿ, ನಗರಸಭೆ ಪ್ರತಿನಿಗಳೂ ಇಲ್ಲ. ನಗರಸಭೆ ಆಡಳಿತಾಕಾರಿಯಾದ ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು.-ಲಕ್ಷ್ಮಮ್ಮ, ಬ್ರಾಹ್ಮಣ ಬೀದಿ ನಿವಾಸಿ, ಒಳಚರಂಡಿ ನೀರು ನಲ್ಲಿ ನೀರಿಗೆ ಸೇರುತ್ತಿರುವುದನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಶೀಘ್ರವೇ ಶುದ್ಧ ನೀರು ಪೂರೈಸಲಾಗುವುದು. ಅಲ್ಲಿವರೆಗೂ ಟ್ಯಾಂಕರ್ ನೀರು ಪೂರೈಸಲು ಕ್ರಮವಹಿಸಲಾಗಿದೆ.
-ಶಿವಪ್ಪನಾಯಕ, ಪ್ರಭಾರಪೌರಾಯುಕ್ತ * ಸಂಪತ್‌ಕುಮಾರ್