Advertisement

Kundapura: ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಗಡುವು

02:54 PM Dec 31, 2024 | Team Udayavani |

ಕುಂದಾಪುರ: ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಈಗಾಗಲೇ ಗುರುತಿಸಲ್ಪಟ್ಟ ಜಾಗದಲ್ಲಿ ದ್ವಿಚಕ್ರ, ಚತುಶ್ಚಕ್ರ ವಾಹನ ಪಾರ್ಕಿಂಗ್‌, ನೋ ಪಾರ್ಕಿಂಗ್‌ ಕುರಿತು ಮೇಲಧಿಕಾರಿಗಳಿಂದ ಸೂಕ್ತ ಅನುಮೋದನೆ ಪಡೆದು ಗಜೆಟ್‌ ನೋಟಿಫಿಕೇಶನ್‌ಗೆ ಕ್ರಮ ತೆಗೆದುಕೊಳ್ಳಲು ಇಲ್ಲಿನ ಪುರಸಭೆ ಮುಂದಾಗಿದೆ.

Advertisement

ಸೋಮವಾರ ಅಧ್ಯಕ್ಷ ಮೋಹನದಾಸ
ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಂಚಾರ ಠಾಣೆ ಪೊಲೀಸರ ಸಮ್ಮುಖ ಏಕಮುಖ ಸಂಚಾರ, ನಗರದಲ್ಲಿ ವೇಗಮಿತಿ, ನಗರದೊಳಗೆ ಹಂಪ್‌, ಬೆಂಗಳೂರು ಬಸ್‌ಗಳ ನಿಲುಗಡೆ, ಪಾರ್ಕಿಂಗ್‌ ಕುರಿತು ಚರ್ಚೆ ನಡೆಯಿತು. ಗಿರೀಶ್‌ ಜಿ.ಕೆ., ಸಂತೋಷ್‌ ಕುಮಾರ್‌ ಶೆಟ್ಟಿ ಈ ಬಗ್ಗೆ ಮಾತನಾಡಿ, ಪಾರ್ಕಿಂಗ್‌ ಬಗ್ಗೆ ಅನೇಕ ಬಾರಿ ಚರ್ಚೆಗಳಾಗಿವೆ. ಡಿಸಿಗಳಿಂದ ಅಧಿಸೂಚನೆಗಳಾಗಿವೆ. ಬೇರೆ ಬೇರೆ ನಗರಗಳಂತೆ ಇಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ಬರಬಾರದು ಎಂದರು.

ಅಧಿಸೂಚನೆಗಳಿಲ್ಲದ ಕಾರಣ ಏಕಮುಖ ಸಂಚಾರ ಹಾಗೂ ನೋ ಪಾರ್ಕಿಂಗ್‌ಗೆ ದಂಡ ವಿಧಿಸಿಲ್ಲ. ನಗರದೊಳಗೆ ವೇಗಮಿತಿ 30 ಕಿ.ಮೀ. ಇದ್ದು ಸೀ³ಡ್‌ಗನ್‌ ಮೂಲಕ ದಂಡ ಹಾಕಿದರೆ 1 ಸಾವಿರ ರೂ. ಕಟ್ಟಬೇಕಾಗುತ್ತದೆ. ಎಐ ಕೆಮರಾ ಹಾಕಿದರೆ ನಿರ್ವಹಣೆಗೆ ಖರ್ಚು ಬರುತ್ತದೆ. ಹಬ್ಬದ ಸಂದರ್ಭ ಹೊರತಾಗಿ ಇಲ್ಲಿ ಅಷ್ಟು ಸಮಸ್ಯೆ ಬರುವುದಿಲ್ಲ . ನಗರದಲ್ಲಿ ಹಂಪ್‌ ಹಾಕುವಂತಿಲ್ಲ, ವೇಗಮಿತಿ ಸಾಧನ ರಸ್ತೆಗೆ ಹಾಕಬಹುದು. ಈಗಾಗಲೇ ಗುರುತಿಸಲ್ಪಟ್ಟ ಪಾರ್ಕಿಂಗ್‌ ತಾಣಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಸೂಕ್ತ ನೊಟಿಫಿಕೇಶನ್‌ಗೆ ಮುಂದುವರಿಸಲಾಗುವುದು ಎಂದು ಸಂಚಾರ ಠಾಣೆ ಎಸ್‌ಐ ಪ್ರಸಾದ್‌ ಹೇಳಿದರು.

ನಗರದಲ್ಲಿ ವೀಲಿಂಗ್‌, ಅತಿ ವೇಗದ ಚಾಲನೆಯಿಂದ ಅಪಘಾತಗಳಾಗುತ್ತಿವೆ. ಅಂತಹವರಿಗೆ ದಂಡ ವಿಧಿಸಬೇಕು ಎಂದು ರೋಹಿಣಿ ಉದಯ ಕುಮಾರ್‌, ಬಸ್‌ ಬಾಗಿಲಲ್ಲಿ ನೇತಾಡುವವರಿಗೆ ದಂಡ ಹಾಕಿ ಎಂದು ರಾಘವೇಂದ್ರ ಖಾರ್ವಿ, ಆಸ್ಪತ್ರೆ ಬಳಿ ಹಾರನ್‌ ಹಾಕದಂತೆ ಮುಖ್ಯಾಧಿಕಾರಿ ಆನಂದ್‌, ಬಸ್‌ಗಳಲ್ಲಿ ಹಾಡು ಬಳಸಬಾರದು ಎಂದು ದೇವಕಿ ಸಣ್ಣಯ್ಯ, ಬೆಂಗಳೂರು ಬಸ್‌ಗಳ ಪಾರ್ಕಿಂಗ್‌ನಿಂದ ತೊಂದರೆಯಾಗುತ್ತಿದೆ ಎಂದು ಪ್ರಭಾಕರ್‌ ಹೇಳಿದರು. ರಿಕ್ಷಾ ಪಾರ್ಕಿಂಗ್‌ ವಿಷಯ ಚರ್ಚೆಗೆ ಇಟ್ಟಿದ್ದರೂ ಆರ್‌ಟಿಒ ಅಧಿಕಾರಿಗಳೇ ಬಂದಿಲ್ಲ ಎಂದು ವೀಣಾ ಭಾಸ್ಕರ್‌ ಹೇಳಿದರು. ಉಪಾಧ್ಯಕ್ಷೆ ವನಿತಾ ಬಿಲ್ಲವ ಉಪಸ್ಥಿತರಿದ್ದರು.

ಹೆದ್ದಾರಿ ಅಧಿಕಾರಿಗಳ ಬದಲು ಗುತ್ತಿಗೆದಾರ!
ಹೆದ್ದಾರಿ ಕುರಿತಾದ ಸಮಸ್ಯೆಗಳ ಚರ್ಚೆಗೆ ಗುತ್ತಿಗೆದಾರ ಸಂಸ್ಥೆಯ ಕಡೆಯವರು ಬಂದಿದ್ದು ಸದನದ ಸಮಯ ವ್ಯರ್ಥ ಮಾಡುವ ತಂತ್ರ. ಸದನಕ್ಕೆ ಮಾಡುವ ಅವಮಾನ ಎಂದು ಗಿರೀಶ್‌ ಜಿ.ಕೆ. ಹೇಳಿದರು. ಎಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಪಾಲಿಸಿಲ್ಲ, ಪುರಸಭೆ ಮೀಟಿಂಗ್‌ನಲ್ಲಿ ಮಾಡಿದ ನಿರ್ಣಯಗಳಿಗೆ ಬೆಲೆ ನೀಡಲಿಲ್ಲ ಎಂದರು. ಅಬ್ಬು ಮಹಮ್ಮದ್‌, ಸಂದೀಪ್‌ ಖಾರ್ವಿ, ಸಂತೋಷ್‌ ಶೆಟ್ಟಿ ಸಮಸ್ಯೆಗಳನ್ನು ವಿವರಿಸಿದರು. ಅಧಿಕಾರಿಗಳ ಬದಲು ಗುತ್ತಿಗೆದಾರರು ಬಂದರೆ ಏನು ಪ್ರಯೋಜನ ಎಂದು ಶೇಖರ್‌ ಪೂಜಾರಿ ಹೇಳಿದರು. ಕೆಎಸ್‌ಆರ್‌ಟಿಸಿ ಬಳಿ ಸರ್ವಿಸ್‌ ರಸ್ತೆಗೆ ಭೂಸ್ವಾಧೀನ ಆಗಿದ್ದರೂ ಪರಿಹಾರದ ಕುರಿತು ತಕರಾರು ನ್ಯಾಯಾಲಯದಲ್ಲಿ ಇದೆ ಎಂದು ಜಿಲ್ಲಾ ಸರ್ವೆ ವಿಭಾಗದ ಕರುಣಾಕರ ಶೆಟ್ಟಿ ಹೇಳಿದರು. ಆಗ ಸಬೂಬು ಬೇಡ, ಎಸಿ ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿ ಎಂದು ಅಧ್ಯಕ್ಷರು ಸೂಚಿಸಿದರು.

Advertisement

ಸಭೆ ನಡೆಸದ ಬಗ್ಗೆ ಆಕ್ಷೇಪ
ತಿಂಗಳಿಗೊಂದು ಮೀಟಿಂಗ್‌ ನಡೆಸಲು ಅಧ್ಯಕ್ಷರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ಸಭೆಯಲ್ಲಿ 93, ಈ ಬಾರಿ 62 ಅಜೆಂಡಾ ಇಡಲಾಗಿದೆ. ನಿರ್ಣಯಗಳು ಯಥಾರೀತಿ ದಾಖಲಾಗುವುದಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಹೇಳಿದ ನಿರ್ಣಯಗಳು ದಾಖಲೆಯಲ್ಲಿ ಇರುವುದಿಲ್ಲ ಎಂದು ಸಂತೋಷ್‌ ಶೆಟ್ಟಿ ಹೇಳಿದರು.

ಸುದಿನ ವರದಿ ಪ್ರಸ್ತಾಪ
ಸುದಿನದಲ್ಲಿ ಡಿ.30ರಂದು ಪ್ರಕಟವಾದ ಅಟೆನÒನ್‌ ಪೀÉಸ್‌ ಅಂಕಣದ ಕುರಿತು ಸಂತೋಷ್‌ ಶೆಟ್ಟಿ ಪೊಲೀಸರ ಗಮನ ಸೆಳೆದರು. ಶಾಸ್ತ್ರಿ ಸರ್ಕಲ್‌ ರಸ್ತೆಯಲ್ಲಿ ಬಾಕಿಯಾದ ಬೋಲ್ಟ್ ತೆಗೆಯಲು ಸೂಚಿಸಿ, ಪೊಲೀಸರು ತೆಗೆಯುವ ಭರವಸೆ ನೀಡಿದರು.

ಜಲಸಿರಿ: ಸದಸ್ಯರ ಜಟಾಪಟಿ
– ಜಲಸಿರಿ ಯೋಜನೆಯ ಕುರಿತಾಗಿ ಆಡಳಿತ ಪಕ್ಷದ ಸದಸ್ಯರ ನಡುವೇ ಜಟಾಪಟಿ ನಡೆಯಿತು. ಕೊನೆಗೆ ಅಧ್ಯಕ್ಷರು ಸಮಾಧಾನ ಮಾಡಿದರು.
– ಸಂತೋಷ್‌ ಶೆಟ್ಟಿ: ಜಲಸಿರಿ ಯೋಜನೆ ಒಪ್ಪಂದ ಸಂದರ್ಭ ಕೆಲವೊಂದು ಚರ್ಚೆಯ ನಿರ್ಣಯಗಳ ದಾಖಲಾತಿ ಸರಿಯಾಗಿ ನಡೆಯಲಿಲ್ಲ.
– ವೀಣಾ ಭಾಸ್ಕರ್‌: ಆಗಲೇ ಆಕ್ಷೇಪ ಮಾಡಬೇಕಿತ್ತು, ಮೂರು ವರ್ಷದ ನಂತರ ಅಲ್ಲ.
– lಗಿರೀಶ್‌ ಜಿ.ಕೆ.: ಜಲಸಿರಿ ಯೋಜನೆ ಚೆನ್ನಾಗಿದ್ದು ಸಮಸ್ಯೆಗಳಿದ್ದರೆ ಚರ್ಚೆ ನಡೆಯಲಿ, ಹೊರತಾಗಿ ಅನವಶ್ಯ ಟೀಕೆ ಸಲ್ಲದು.
– ಸಂತೋಷ್‌ ಶೆಟ್ಟಿ: ಜಲಸಿರಿ ಕುರಿತಾದ ಒಪ್ಪಂದದಲ್ಲೇ ಲೋಪವಾಗಿದೆ. ಈ ಬಗ್ಗೆ ನಡೆದ ಚರ್ಚೆಯ ನಿರ್ಣಯದಲ್ಲಿ ಲೋಪವಾಗಿದೆ (ಇದೇ ವಿಚಾರದಲ್ಲಿ ಗಿರೀಶ್‌ ಹಾಗೂ ಸಂತೋಷ್‌ ನಡುವೆ ಬಿಸಿಮಾತು ವಿನಿಮಯ ನಡೆಯಿತು.
–  ಸಂತೋಷ್‌ ಶೆಟ್ಟ: ನನ್ನನ್ನು ಗುರಿಯಾಗಿಸಿ ಮಾತಾಡಬೇಡಿ.
– ಗಿರೀಶ್‌ ಜಿ.ಕೆ.: ನಾನು ಯಾರನ್ನೂ ಗುರಿ ಮಾಡಿಲ್ಲ, ಸಮಸ್ಯೆಗಳಿದ್ದರೆ ಹೇಳಿ
– ಸಂತೋಷ್‌: ನಿಮಗೆ ಹೇಳುವ ಅವಶ್ಯ ಇಲ್ಲ
– ಗಿರೀಶ್‌: ನನಗಲ್ಲ ಸಭೆಗೆ ಹೇಳಿ
– ಶೇಖರ ಪೂಜಾರಿ: ಜಲಸಿರಿ ಯೋಜನೆಯಲ್ಲಿ ಗೋಲ್‌ಮಾಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next