ಮೂಲದವರು. ಅದರಲ್ಲಿ ಪ್ರಬಂಧಕ ರಾಗಿ ಕೆಲಸ ಮಾಡುತ್ತಿರುವವರು ಮೂಡುಬಿದಿರೆಯ ಪ್ರಮೋದ್ ಶೆಣೈ.
Advertisement
ರಾಮ ಮಂದಿರದ ನಿರ್ಮಾಣದ ಹೊಣೆಹೊತ್ತ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಕಂಪೆನಿಯ ಟಿಸಿಎಸ್ ಸಂಸ್ಥೆಯು ತನ್ನ ಉಪ ಸಂಸ್ಥೆಯಾದ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ವಿದ್ಯುತ್ ಕಾಮಗಾರಿ ವಹಿಸಿಕೊಟ್ಟಿದ್ದು, ಆ ಸಂಸ್ಥೆಗೆ ಪರಿಚಿತರಾಗಿದ್ದ ರಾಜೇಶ್ ಶೆಟ್ಟಿ ಅವರ ಪಾಲಿಗೆ ಗುತ್ತಿಗೆ ಒದಗಿ ಬಂದಿದೆ. ಈ ಕಾರ್ಯದಲ್ಲಿ 200 ಮಂದಿ ಪರಿಣಿತರು ತೊಡಗಿಸಿಕೊಂಡಿದ್ದಾರೆ.
“ಪೂರಾ ಕಟೀಲಮ್ಮನ ದಯೆ, ಶ್ರೀ ರಾಮದೇವೆರ್‌ನ ಕೃಪೆ. ಎಂಕ್ ಉಂದೆಂಚ ಒದಗ್‌ದ್ ಬತ್ತ್ಂಡ್ ಪಂಡ್ದೇ ಪನ್ಯರೆ ಆಪುಜಿ’ ಎಂದು ಉದಯವಾಣಿ ಜತೆ ಅನಿಸಿಕೆ ಹಂಚಿಕೊಂಡ ರಾಜೇಶ್ ಅವರು, ಊರಿಗೆ ಬಂದಾಗಲೆಲ್ಲ ಕಟೀಲಿಗೆ ಭೇಟಿ ನೀಡುತ್ತೇನೆ ಎನ್ನಲು ಮರೆಯಲಿಲ್ಲ.