Advertisement

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

07:51 PM Nov 20, 2024 | Team Udayavani |

ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ|| (2-11) ಸತ್ತವರ ಬಗ್ಗೆ ದುಃಖ ಪಡುವುದಾದರೆ ಇದ್ದವರ ಬಗ್ಗೆಯೂ ದುಃಖ ಪಡಬೇಕು. ಅಳುವುದಾದರೆ ಎರಡಕ್ಕೂ ಅಳಬೇಕು. ಪ್ರಾಣ ಹೋದವರ ಬಗ್ಗೆ, ಪ್ರಾಣ ಹೋಗದೆ ಇದ್ದವರ ಬಗೆಗಾಗಲೀ ಪಂಡಿತರಾದವರು ದುಃಖ ಪಡುವುದಿಲ್ಲ ಎನ್ನುತ್ತಾನೆ ಕೃಷ್ಣ. ಸಾಯುತ್ತಾನೆ ಎಂದರೆ ಯಾರಾದರೂ ದುಃಖಪಡುವುದುಂಟೆ? ಸತ್ತ (ಭೂತಕಾಲ) ಎಂದಾಗಲೇ ದುಃಖಪಡುವುದು.ಆದ್ದರಿಂದಲೇ ಗತಅಗತ (ಗತಾಸೂನಗತಾಸೂಂಶ್ಚ) ಎನ್ನುವುದು. ಗತಾ ಎನ್ನುವ ಬದಲು ಮೃತ ಎಂದು ಹೇಳಬಹುದಿತ್ತು. ಪ್ರಾಣ ಹೋದ ಮೇಲೆ ದುಃಖ ಎನ್ನುವುದರ ಸೂಚನೆ ಇದು. ಮರಣ= ಕಾಣದೆ ಇರುವುದು. ಕಣ್ಣು, ಕಿವಿ ಹೋದರೆ ಮರಣ ಎನ್ನುವುದಿಲ್ಲ. “ಮುಖ್ಯಪ್ರಾಣ’ ಹೋದರೆ ಮರಣ.

Advertisement

ಪ್ರಾಣಾಪಾನವ್ಯಾನೋದಾನಸಮಾನ- ಈ ಐದೂ ಪ್ರಾಣಗಳು ಹೋದ ಮೇಲೆ ಸತ್ತ ಎಂದಾಗುವುದು. ಪಂಚಪ್ರಾಣಗಳು ಹೋಗಿಬಿಟ್ಟರೆ ಪಂಡಿತರು ದುಃಖಪಡುವುದಿಲ್ಲ. “ಸತ್ತವನನ್ನು, ಸಾಯದೆ ಇದ್ದವನನ್ನು’ ಎನ್ನ‌ಬಹುದಿತ್ತು. ದುಃಖ ಯಾವಾಗ ಆಗುತ್ತದೆ ಎಂದರೆ “ನನಗೊಬ್ಬನಿಗೆ ಮಾತ್ರ ದುಃಖವಾಯಿತು’ ಎಂದಾಗ. ಎಲ್ಲರೂ ಸಾಯುತ್ತಾರೆ, ನಾನೂ ಸಾಯುತ್ತೇನೆ ಎಂದು ಪಂಡಿತರಿಗೆ ಗೊತ್ತು. ಆದ್ದರಿಂದಲೇ ಏಕವಚನದಲ್ಲಿ ಹೇಳಿದ್ದರೆ ತಪ್ಪಲ್ಲದಿದ್ದರೂ ಬಹುವಚನವನ್ನು ಶ್ರೀಕೃಷ್ಣ ಹೇಳಿದ್ದ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next