Advertisement

Ayodhya; ರಾಮಮಂದಿರಕ್ಕೆ ಉಗ್ರ ಪನ್ನು ದಾಳಿ ಬೆದರಿಕೆ!

10:36 PM Nov 11, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರ ಹಾಗೂ ಕೆನಡಾದ ಹಲವು ದೇವಾಲಯಗಳ ಮೇಲೆ ನ. 16 ಹಾಗೂ 17ರಂದು ದಾಳಿ ನಡೆಸುವುದಾಗಿ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಬೆದರಿಕೆ ಒಡ್ಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವೀಡಿಯೋ ಒಂದರಲ್ಲಿ ಆತ ಮಾತನಾಡಿದ್ದು, ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಪ್ರತೀ ಅಡಿಪಾಯವನ್ನೂ ನಾವು ಅಲುಗಾಡಿಸುತ್ತೇವೆ. ಮಿಸ್ಸಿಸಾಗಾದಲ್ಲಿನ ಕ್ಯಾಲಿಬರಿ ಹಿಂದೂ ದೇವಾಲಯದ ಮೇಲೆ ನ. 16ರಂದು, ಬ್ರಾಂಪ್ಟನ್‌ನ ತ್ರಿವೇಣಿ ಮಂದಿರದ ಮೇಲೆ ನ. 17ರಂದು ದಾಳಿ ನಡೆಯಲಿದೆ ಎಂದಿದ್ದಾನೆ.

Advertisement

ಕೆನಡಾಕ್ಕೆ ನಿಷ್ಠರಾಗಿ, ಇಲ್ಲವೇ ತೊಲಗಿ
ಮೋದಿಯ ಹಿಂಸಾತ್ಮಕ ಹಿಂದುತ್ವವನ್ನು ಪಾಲಿಸುವ ಭಾರತೀಯ-ಕೆನಡಿಯನ್ನರೇ, ಕೆನಡಾ ಸಂಸತ್ತಿನಲ್ಲಿ ಹಿಂದೂ ಭಯೋತ್ಪಾದನೆಯ ಪ್ರತಿನಿಧಿಯಾಗಿರುವ ಸಂಸದ ಚಂದ್ರ ಆರ್ಯ ಅವರೇ, ನೀವೆಲ್ಲ ಕೆನಡಾಕ್ಕೆ ನಿಷ್ಠರಾಗಿರಿ, ಇಲ್ಲವಾದಲ್ಲಿ ಕೆನಡಾವನ್ನು ತೊರೆಯಿರಿ. ಖಲಿಸ್ಥಾನಿ ಪರ ಸಿಕ್ಖರ ವಿರುದ್ಧ ಭಾರತೀಯ ರಾಯಭಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೋ ಹಾಗೂ ಕೆನಡಾ ಪೊಲೀಸರು (ಆರ್‌ಸಿಎಂಪಿ) ಒಪ್ಪಿಕೊಂಡಿದ್ದಾರೆ. ಜತೆಗೆ ನಿಜ್ಜರ್‌ ಹತ್ಯೆಗೂ ರಾಯಭಾರಿಗಳೇ ಜವಾಬ್ದಾರರು ಎಂಬುದನ್ನೂ ಅಂಗೀಕರಿಸಿದ್ದಾರೆ ಎಂದು ಪನ್ನು ಹೇಳಿದ್ದಾನೆ.

ಮೋದಿ, ಶಾಗೆ ಸವಾಲು
ಭಾರತೀಯ ರಾಯಭಾರಿಗಳ ಮೇಲೆ ನಮ್ಮ ಪ್ರತೀಕಾರ ಮುಂದುವರಿಯಲಿದೆ. ನ. 16-17ರಂದು ನಡೆಯಲಿರುವ ದಾಳಿಗಳು ಈ ರಾಯಭಾರಿಗಳಿಗೆ ಹೊಸ ಸವಾಲಾಗಲಿದೆ. ಸಿಕ್ಖ್ ಫಾರ್‌ ಜಸ್ಟೀಸ್‌ ಸಂಘಟನೆಯು ಮೋದಿಯ ರಾಜಕಾರಣವನ್ನು ಕೊಲ್ಲಲಿದೆ. ಮೋದಿ ಹಾಗೂ ಅಮಿತ್‌ ಶಾ ಅವರೇ, ಕೆನಡಾ ನಿಮ್ಮ ಅಯೋಧ್ಯೆಯ ರೀತಿಯಲ್ಲ ಎಂಬುದನ್ನು ತಿಳಿಯಿರಿ. ಆರೆಸ್ಸೆಸ್‌, ಬಜರಂಗ ಕಾರ್ಯಕರ್ತರು ಕೆನಡಾದ ಗುರುದ್ವಾರ ಸಾಹಿಬ್‌ಗ ದಾಳಿ ಮಾಡಲು ಯತ್ನಿಸಿದ್ದಾರೆ. ಈಗ ನಾವು ನಿಮ್ಮ ಅಯೋಧ್ಯೆಯ ಅಡಿಪಾಯವನ್ನು ಅಲುಗಾಡಿಸುತ್ತೇವೆ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next