ಒಂದಕ್ಕೊಂದು ತಾಳಿತಂತಿ ಇಲ್ಲದೆ ಒಂದೊಂದು ಬಾರಿ ಒಂದೊಂದನ್ನು ಹೇಳುವುದನ್ನು “ಪ್ರಜ್ಞಾವಾದ’ ಎಂದು ಕೃಷ್ಣ ಹೇಳಿದ್ದಾನೆ. ಈ ಅಜ್ಞಾನದ ಮುಖಗಳು ಅರ್ಜುನನಿಗೆ ಇತ್ತು. ನಮ್ಮ ಕಣ್ಣೆದುರು ಕೊಲೆ ನಡೆದರೂ ಕೊಲೆ ಮಾಡಿದವನನ್ನು “ಕೊಲೆ ಆರೋಪಿ’ ಎಂದೇ ಹೇಳುವುದನ್ನು ನೋಡುತ್ತೇವೆ, ಕೊಲೆ ಪಾತಕಿ ಎಂದು ದೃಢಪಡಿಸುವುದು ನ್ಯಾಯಾಧೀಶರ ಪಾತ್ರ. ಲೌಕಿಕವಾಗಿಯೂ ನ್ಯಾಯಾಲಯದ ತೀರ್ಪನ್ನು ಹೀಗಳೆಯಬಾರದು. ಅದು ನ್ಯಾಯಾಲಯನಿಂದನೆ ಪ್ರಕರಣವೆಂದು ದಾಖಲಾಗುತ್ತದೆ.
ದೇವರ ಸಾಮ್ರಾಜ್ಯದ ನೀತಿಯೂ ಇಂತಹುದೇ. ನಿರ್ಧಾರ ಆತನದೇ. ಪಂಡಿತರಾದವರು ತಮ್ಮ ಪಾಲಿನ ಕೆಲಸ ಮಾಡುತ್ತಾರೆ ವಿನಾ ಸಮರ್ಥನೆಯನ್ನು ಮಾಡಲೇಬಾರದು/ಮಾಡುವುದಿಲ್ಲ. ನ್ಯಾಯಾನ್ಯಾಯದ ತೀರ್ಮಾನ ದೇವರಿಗೆ ಸಂಬಂಧಿಸಿದ್ದು. ನಮ್ಮ ಕರ್ತವ್ಯವನ್ನು ಮಾಡುವ ಅವಕಾಶವನ್ನು ಕಳೆದುಕೊಳ್ಳಲೂಬಾರದು.
ಪಾಂಡವರೈವರು, ನಾನು ಇರುವಾಗಲೇ “ಅದು ತಪ್ಪು, ಇದು ತಪ್ಪು’ ಎಂದು ನೀನೇ ತೀರ್ಮಾನ ಮಾಡಬಾರದು ಎಂದು ಕೃಷ್ಣ ಅರ್ಜುನನಿಗೆ ಎಚ್ಚರಿಕೆ ಕೊಡುತ್ತಾನೆ. ಕೊನೆಗೂ ಸಾಯುವುದೆಂದರೆ ದೇಹದ ವಿಕಾರವಷ್ಟೆ. ನಾಟಕ ರಂಗದಲ್ಲಿ ಕೊನೆಗೆ ಅಲಂಕಾರವನ್ನು ತೆಗೆದರೆ ದುಃಖಪಡುವುದಕ್ಕೇನಿದೆ? ಹುಟ್ಟುವಾಗಲೇ ಸಾಯುವ ದಿನ ನಿಗದಿಯಾಗಿದೆ (ಗತಾಸೂನ್). ಹೀಗಿರುವಾಗ ಪಂಡಿತರೇಕೆ ದುಃಖಪಡುತ್ತಾರೆ? ಎಲ್ಲರೂ ಅವರವರ ಸಮಯವಾದ ಬಳಿಕ ಮುಖವಾಡವನ್ನು ಕಳಚಲೇಬೇಕು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811