ರಾಮಮಂದಿರ ಉದ್ಘಾಟನೆ ಸಂದರ್ಭದ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಆಗ್ರಹ ಇತ್ತು.
Advertisement
ಸತೀಶ್ ಪುಣಿಂಚತ್ತಾಯ ಪೆರ್ಲ ಅವರ ನಿರ್ದೇಶನದಲ್ಲಿ “ವಾಲಿ ಮೋಕ್ಷ’ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಲಾ ಯಿತು. ಉತ್ತರ ಭಾರತವಾದ್ದರಿಂದ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಪ್ರದರ್ಶನ ನಡೆಸುವ ಉದ್ದೇಶವಿದ್ದರೂ, ದೇವಾಲಯ ನಿರ್ಮಾಣದ ರೂವಾರಿ, ವಿಎಚ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜೀ ಅವರ ಸೂಚನೆಯಂತೆ ಕನ್ನಡದಲ್ಲೇ ಯಕ್ಷಗಾನವನ್ನು ಪ್ರದರ್ಶಿಸ ಲಾಯಿತು. ಸಭಿಕರಿಂದ ಮೆಚ್ಚುಗೆಯೂ ವ್ಯಕ್ತವಾಯಿತು.