ಗಂಗಾವತಿ :ಮಕ್ಕಳಿಗೆ ಗಣಿತ ವಿಷಯ ಕಬ್ಬಿಣದ ಕಡಲೆಯಾಗಿರುತ್ತದೆ. ಅದರಲ್ಲೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಷ್ಟ. ಇದನ್ನು ಹೋಗಲಾಡಿಸಲು ಗಂಗಾವತಿ ನಗರದ ಸರಕಾರಿ ಜೂನಿಯರ್ ಕಾಲೇಜು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಕುಮಾರಸ್ವಾಮಿ ಗಣಿತ ವಿಷಯವನ್ನು ವಿದ್ಯಾರ್ಥಿಗಳಿಗೆ ಸರಳ ಮಾಡಲು ರಂಗೋಲಿಯಲ್ಲಿ ಹಲವು ಗಣಿತ ವಿಷಯದ ಫಾರ್ಮುಲಾಗಳನ್ನು ಬಿಡಿಸುವ ಮೂಲಕ ಪರೀಕ್ಷೆಯಲ್ಲಿ ಗಣಿತ ವಿಷಯವನ್ನು ಸರಳ ಮಾಡಿದ್ದಾರೆ.
ಪಿಯುಸಿ ಬೋರ್ಡ್ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗ ಕಲಾ ವಿಭಾಗವನ್ನು ಸರಳೀಕರಣ ಮಾಡಲು ಹಲವಾರು ಪ್ರಾಯೋಗಿಕ ಯತ್ನಗಳ ನಡೆಸುತ್ತಿರುವ ಮಧ್ಯೆ ಗಂಗಾವತಿಯ ಜೂನಿಯರ್ ಕಾಲೇಜ್ ವಿಶಿಷ್ಟ ಪ್ರಯೋಗ ಮಾಡಿದೆ. ಫಾರ್ಮುಲಾಗಳ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡುವ ಮತ್ತು ಪ್ರಮಾಣ ಪತ್ರವನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ.
ಗಣಿತ ರಂಗೋಲಿ ಸ್ಪರ್ಧೆಯನ್ನು ಪ್ರಾಚಾರ್ಯ ಬಸ್ಸಪ್ಪ ನಾಗೋಲಿ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಕುಮಾರಸ್ವಾಮಿ ಸೇರಿದಂತೆ ಸೋಮಶೇಖರಗೌಡ, ಮಹಾಲಕ್ಷ್ಮಿ ,ಅಜ್ಗರ್ ಅಲಿ, ಕರಿಮುಲ್ಲಾ ಸೇರಿದಂತೆ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳಿದ್ದರು.
ಇದನ್ನೂ ಓದಿ : ಉಡುಪಿ ಆಯ್ತು, ಕುಂದಾಪುರ ಕಾಲೇಜಿನಲ್ಲೂ ಹಿಜಾಬ್ ವಿವಾದ