Advertisement

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

11:14 AM Dec 20, 2024 | Team Udayavani |

ಹೈದರಾಬಾದ್‌: ಫಾರ್ಮುಲಾ-ಇ ರೇಸ್‌ (Formula E race) ಅವ್ಯವಹಾರ ಪ್ರಕರಣದಡಿ ಬಿಆರ್‌ಎಸ್‌ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್‌ ಮತ್ತು ಇನ್ನಿಬ್ಬರ ವಿರುದ್ಧ ತೆಲಂಗಾಣ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್ಐಆರ್‌ ದಾಖಲಿಸಿದೆ.

Advertisement

ಸರಕಾರಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಅವರ ವಿರುದ್ಧ ಗುರುವಾರ ಎಫ್ಐಆರ್‌ ದಾಖಲಾಗಿದೆ.

ರಾವ್‌ ವಿರುದ್ಧ ಕಾನೂನು ಕ್ರಮ ಜರಗಿಸಲು, ರಾಜ್ಯಪಾಲ ಜಿಷ್ಣು ದೇವ್‌ ವರ್ಮಾ ಇತ್ತೀಚೆಗೆ ಅನುಮತಿ ನೀಡಿದ್ದರು. ಈ ಬಗ್ಗೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಗೆ ಬುಧವಾರ ಬಹಿರಂಗ ಪತ್ರ ಬರೆದಿದ್ದ ರಾವ್‌, ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next