Advertisement

ರಾಜ್ಯಕ್ಕೆ ಮಲೇಷಿಯಾ ಮರಳು: ಟಿಬಿಜೆ

07:25 AM Dec 01, 2017 | |

ಬೆಂಗಳೂರು: ರಾಜ್ಯದ ಮರಳಿನ ಸಮಸ್ಯೆ ನೀಗಿಸಲು ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

Advertisement

ಎಂಎಸ್‌ಐಎಲ್‌ ಮೂಲಕ ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಹೊಸ ವರ್ಷದ ಆರಂಭಕ್ಕೆ ಮರಳು ಆಮದು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಡೀಲರ್‌ ನೇಮಕ: ಮರಳನ್ನು 50 ಕೆಜಿಯ ಸಿಮೆಂಟ್‌ ಚೀಲಗಳಲ್ಲಿ ತುಂಬಿಸಿ ಆಮದು ಮಾಡಿಕೊಳ್ಳಲಾಗುತ್ತಿದೆ.
ಪ್ರತಿ ಟನ್‌ಗೆ 3,500ರಿಂದ 3,800ರೂ. ವರೆಗೆ ಬೆಲೆ ನೀಡಲಾಗುತ್ತಿದೆ. ರಾಜ್ಯಕ್ಕೆ ಆಮದು ಮಾಡಿಕೊಂಡ ನಂತರ
ಎಂಎಸ್‌ಐಎಲ್‌ ಅಧಿಕೃತವಾಗಿ ಡೀಲರ್‌ಗಳನ್ನು ನೇಮಕ ಮಾಡಿಕೊಂಡು ಹಂಚಿಕೆ ಮಾಡಲಿದೆ ಎಂದು ಹೇಳಿದರು.

ಮರಳಿನ ಸಮಸ್ಯೆ ಪರಿಹಾರ ಹಾಗೂ ಮರಳುಗಾರಿಕೆಗೆ ಪರವಾನಗಿ ನೀಡಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು
ಬದಲಾಯಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ. ಅಕ್ರಮ ಮರಳು
ಸಾಗಣೆ ಮಾಡುವವರ ವಾಹನವನ್ನೂ ವಶಪಡಿಸಿಕೊಳ್ಳಲು ಸೂಚಿಸ ಲಾಗಿದೆ ಎಂದು ಹೇಳಿದರು.

ಸಾಂಪ್ರದಾಯಿಕ ಮರಳುಗಾರಿಕೆ: ಮಂಗಳೂರಿನಲ್ಲಿ ನಾನ್‌ ಸಿಆರ್‌ಝಡ್‌ ಮತ್ತು ಸಿಆರ್‌ಝಡ್‌ ಪ್ರದೇಶಗಳ ಗೊಂದಲ ನಿವಾರಿಸಲಾಗಿದೆ. ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ
ಎಂದು ಜಯಚಂದ್ರ ಹೇಳಿದರು.

Advertisement

ಮಹದಾಯಿ ಹೋರಾಟಗಾರರಿಗೆ ಕೋರ್ಟ್‌ ನೋಟಿಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಹದಾಯಿ ಹೋರಾಟಗಾರರ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂಪುಟ ತೀರ್ಮಾನಿಸಿದೆ. ಈ ಬಗ್ಗೆ ಕೋರ್ಟ್‌ಗೂ ಮಾಹಿತಿ ನೀಡಲಾಗಿದೆ. ಅಂತಿಮವಾಗಿ ಪ್ರಕರಣ ಕೈ ಬಿಡುವ ಕುರಿತು ಕೋರ್ಟ್‌ ತೀರ್ಮಾನಿಸಲಿದೆ ಎಂದರು. ಇದೇ ವೇಳೆ, ಇಂಧನ ಖರೀದಿ ಹಗರಣ ಕುರಿತು ಸದನ ಸಮಿತಿ ಸದನದಲ್ಲಿ ವರದಿ ಮಂಡನೆ ಮಾಡಿದೆ. ಸದನದ ಸಲಹೆ ಮೇರೆಗೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವ ಕುರಿತಂತೆಯೂ ಮುಂದಿನ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next