ಹೌದು, ಕೆಇಆರ್ಸಿ (ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ) ಮಾದರಿಯಲ್ಲೇ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿ ಪ್ರತ್ಯೇಕ ಆಯೋಗ ರಚಿಸುವ ಸಲುವಾಗಿ ಸಾರಿಗೆ ನಿಗಮಗಳು ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅಸ್ತು ಎಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧದ ಅಂಗೀಕಾರಕ್ಕಾಗಿ ಪ್ರಸ್ತಾವನೆ ಅಧಿವೇಶನದಲ್ಲಿ ಮಂಡನೆ ಆಗಲಿದೆ.
ಈ ಹಿಂದೆಯೇ ಸಾರಿಗೆ ಇಲಾಖೆ ಮೂಲಕ ಆರ್ಥಿಕ ಇಲಾಖೆಗೆ ಈ ಬಗೆಗಿನ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
Advertisement
ಇದಕ್ಕೆ ಅನುಮೋದನೆ ನೀಡಿದ್ದು, ಮುಂದಿನ ಹಂತಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಅನಂತರ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ಚರ್ಚೆಯೊಂದಿಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
Related Articles
Advertisement
ಕೋವಿಡ್ ಬಳಿಕ ನೇಪಥ್ಯಕ್ಕೆಈ ಹಿಂದೆ ಡೀಸೆಲ್ ದರ ಪರಿಷ್ಕರಣೆ ಆದಾಗ ಬಸ್ ಪ್ರಯಾಣ ದರ ಕೂಡ ಪರಿಷ್ಕರಣೆ ಆಗಬೇಕು ಎಂಬ ಆದೇಶ ಇತ್ತು. ಆದರೆ ಕೋವಿಡ್-19 ಅನಂತರ ಇದು ನೇಪಥ್ಯಕ್ಕೆ ಸರಿಯಿತು. ಯಾಕೆಂದರೆ ವೇತನ ಮತ್ತಿತರ ಉದ್ದೇಶಗಳಿಗೆ ಸರಕಾರದ ಅನುದಾನ ಅವಲಂಬಿಸಬೇಕಾಯಿತು. ಆಗ ಯಾವುದೇ ನಿರ್ಣಯಗಳು ಆಗಬೇಕಾದರೆ, ತನ್ನ ಅನುಮತಿ ಪಡೆಯುವಂತೆ ಸರಕಾರ ಸೂಚನೆ ನೀಡಿತು. ಆದೇಶ ಇದ್ದರೂ ಅದಕ್ಕೆ ಮೊದಲು ಕೂಡ ದರ ಪರಿಷ್ಕರಣೆ ಸಂದರ್ಭದಲ್ಲಿ ಸರಕಾರದ ಅನುಮತಿ ಪಡೆಯಲಾಗುತ್ತಿತ್ತು. ಕೆಇಆರ್ಸಿ ಮಾದರಿಯಲ್ಲಿ ಸಾರಿಗೆ ನಿಗಮಗಳಿಗೆ ಸಂಬಂಧಿಸಿ ನಿಯಂತ್ರಣ ಆಯೋಗ ರಚಿಸುವ ಪ್ರಸ್ತಾವನೆ ಇನ್ನೂ ಸರಕಾರದ ಪರಿಶೀಲನೆಯ ಹಂತದಲ್ಲಿದೆ. ಅದಕ್ಕೆ ನಿಯಮಗಳ ತಿದ್ದುಪಡಿಯಾಗಿ ಅಧಿವೇಶನದಲ್ಲಿ ಮಂಡನೆ ಆಗಬೇಕು. ಇದೆಲ್ಲವೂ ಮುಂಬರುವ ದಿನಗಳಲ್ಲಿ ಆಗಲಿದೆ.
-ರಾಮಲಿಂಗಾರೆಡ್ಡಿ , ಸಾರಿಗೆ ಸಚಿವ -ವಿಜಯ ಕುಮಾರ ಚಂದರಗಿ