Advertisement
ಅನಾರೋಗ್ಯಕ್ಕೊಳಗಾಗಿರುವ ತಾಯಿಯ ಆರೈಕೆ, ಫಾರ್ಮ್ಹೌಸ್ನಲ್ಲಿರುವ ಪ್ರಾಣಿಗಳನ್ನು ನೋಡಿ ಕೊಳ್ಳಬೇಕು. ಜತೆಗೆ ಬೆನ್ನು ನೋವಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಚಾರವಾಗಿ ಮೈಸೂರಿನ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆಯಬೇಕು ಹಾಗೂ ಇತರೆ ಕಾರಣಗಳನ್ನು ನೀಡಿ ನಟ ದರ್ಶನ್ ಅವರು ಬೆಂಗಳೂರಿನ ಸಿಸಿಎಚ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿ ಸಿದ ನ್ಯಾಯಾಲಯವು 2 ವಾರಗಳ ಗಡುವು ನೀಡಿತ್ತು. ಅದು ಭಾನುವಾರ ರಾತ್ರಿಗೆ ಮುಕ್ತಾಯ ಗೊಳ್ಳಲಿದೆ. ಹೀಗಾಗಿ ನಟ ದರ್ಶನ್ ಸೋಮವಾರ ಬೆಂಗಳೂರಿಗೆ ವಾಪಸ್ ಬರಬೇಕಿದೆ. ಅಲ್ಲದೇ ರೇಣುಕಸ್ವಾಮಿ ಕೊಲೆ ಪ್ರಕರಣ ಮುಗಿಯುವರೆಗೂ ಬೆಂಗಳೂರು ಬಿಟ್ಟು ಹೋಗದಂತೆ ದರ್ಶನ್ಗೆ ಕೋರ್ಟ್ ಸೂಚನೆ ನೀಡಿತ್ತು.
Related Articles
Advertisement
ಸಂಕ್ರಾಂತಿ ಬಳಿಕ ದರ್ಶನ್ಗೆ ಶಸ್ತ್ರಚಿಕಿತ್ಸೆ ಸಾಧ್ಯತೆ:
ಮತ್ತೂಂದೆಡೆ ಕಾಲು ನೋವು ಹೆಚ್ಚಾಗಿದ್ದರಿಂದ ದರ್ಶನ್ ಕೊನೆಗೂ ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 14 ಸಂಕ್ರಾಂತಿ ಮುಗಿದ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆಯಿಂದ ಮಾತ್ರ ದರ್ಶನ್ಗೆ ಬೆನ್ನು ನೋವು ಹಾಗೂ ಕಾಲು ನೋವು ಗುಣಮುಖ ವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಕೊನೆಗೂ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.