ಮಡಿಕೇರಿ: ಕೊಡಗು- ಕೇರಳದ ಗಡಿ ಭಾಗವಾದ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಸಹಕಾರದೊಂದಿಗೆ ಸಹಾಯಕ ಚುನಾವಣಾಧಿಕಾರಿಗಳು ಪಿಕ್‌ಅಪ್ ಜೀಪು, ಮಿನಿ ಲಾರಿಯನ್ನು ತಪಾಸಣೆಗೆ ಒಳಪಡಿಸಿ ದಾಗ ಒಟ್ಟು ರೂ. 2,62,500 ನಗದು ಪತ್ತೆಯಾಗಿದ್ದು, ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ 8.30ರ ಹೊತ್ತಿಗೆ ಕೇರಳದ ಕಡೆಯಿಂದ ಬಂದ ಕೆ.ಎ. 45 ಎ 0638 ಮಹೇಂದ್ರ ಪಿಕ್‌ಅಪ್ ಜೀಪನ್ನು ತಪಾ ಸಣೆಗೆ ಒಳಪಡಿಸಿದಾಗ ವಾಹನ ದಲ್ಲಿ 1,20,000 ರೂ. ನಗದು ಪತ್ತೆ ಯಾಗಿದೆ. ಪೊಲೀಸರು ಜೀಪ್‌ನ ಚಾಲಕ ಮುಜಾಯಿದ್ ಪಾಷ ಹಾಗೂ ಸಯ್ಯದ್ ಮುನ್ನಾ ಅವರನ್ನು ಬಂಧಿಸಿ ಜೀಪನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ 10.30ಕ್ಕೆ ಕರ್ನಾಟಕದ ಕಡೆಗೆ ತೆರಳಲು ಮಾಕುಟ್ಟ ಚೆಕ್ ಪೋಸ್ಟ್‌ಗೆ ಕೇರಳದ ಕಡೆಯಿಂದ ಬಂದ ಕೆ.ಎಲ್. 58 ಎ 5590 ಮಿನಿ ಲಾರಿಯನ್ನು ತಪಾಸಣೆಗೆ ಒಳಪಡಿಸಿದಾಗ ಲಾರಿ ಯಲ್ಲಿ 1,62,500 ರೂ. ನಗದು ಪತ್ತೆಯಾಗಿದೆ. ಪೊಲೀಸರು ನಗದು ವಶಪಡಿಸಿಕೊಂಡು ಮಿನಿಲಾರಿಯ ಚಾಲಕ ಶಫಿ ಹಾಗೂ ಅಯೂಬ್ ಅವ ರನ್ನು ಬಂಧಿಸಿ ಪ್ರಕರಣ ದಾಖ ಲಿಸಿದ್ದಾರೆ. ತಪಾಸಣೆಯಲ್ಲಿ ಸಹಾಯಕ ಚುನಾ ವಣಾಧಿಕಾರಿ ಗಳಾದ ಪ್ರೇಮ್ ಕುಮಾರ್, ಪ್ರಮೋದ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪಾಲ್ಗೊಂಡಿದ್ದರು. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದಾಗ ಕೇರಳದಲ್ಲಿ ದನ ಗಳನ್ನು ಮಾರಾಟ ಮಾಡಿ ನಗದು ಹಣವನ್ನು ಒಯ್ಯುತ್ತಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂ ಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ರಾಜ್ಯ ಗಡಿಭಾಗಗಳಲ್ಲಿ 24 ತಾಸು ಕೂಡ ನಿಗಾ ವಹಿಸಲು ಪ್ರತ್ಯೇಕ ಸಿಬಂದಿಯನ್ನು ನಿಯೋಜಿಸಲಾಗಿದೆ. ಈ ತಂಡಗಳಿಗೆ ಪೊಲೀಸರು ಸಹಕರಿಸುತ್ತಿದ್ದಾರೆ.