Advertisement
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ 50:50ರ ಅನುಪಾತದಲ್ಲಿನ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಾಲ್ಕು ತಿಂಗಳ ಹಿಂದೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಅದರಂತೆ ಮೊದಲ ಬಾರಿಗೆ ಆಗಮಿಸಿದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರು ಬೆಳಗ್ಗೆ 11.20ಕ್ಕೆ ಮುಡಾ ಕಚೇರಿಗೆ ತೆರಳಿ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿ ಹಲವು ಮಾಹಿತಿ ಪಡೆದರು. ಬಳಿಕ ಅಧಿಕಾರಿಗಳಿಂದ 50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ನಿವೇಶನಗಳ ಮಾಹಿತಿ, ಭೂಮಿ ನೀಡಿದವರ ಮಾಹಿತಿ ಕಲೆ ಹಾಕುತ್ತಿರುವುದಲ್ಲದೇ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ರಾತ್ರಿ 10 ಗಂಟೆಯವರೆಗೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿತ್ತು. Advertisement
ಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನ
10:05 PM Nov 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.