Advertisement

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

10:42 PM Nov 05, 2024 | Team Udayavani |

ರಾಂಚಿ: ಜಾರ್ಖಂಡ್‌ ಚುನಾವಣೆಗಾಗಿ ಕಾಂಗ್ರೆಸ್‌ ನೇತೃತ್ವದ “ಇಂಡಿಯಾ’ ಒಕ್ಕೂಟ 7 ಗ್ಯಾರಂಟಿಗಳಿರುವ ಪ್ರಣಾಳಿಕೆ ಬಿಡುಗಡೆ ಮಾಡಿದೆ. 10 ಲಕ್ಷ ಉದ್ಯೋಗ ಸೃಷ್ಟಿ, ಬಡವರಿಗೆ 15 ಲಕ್ಷ ರೂ. ವರೆಗೆ ಆರೋಗ್ಯ ವಿಮೆ, ಬಡವ ರಿಗೆ ನೀಡಲಾಗುವ ಅಕ್ಕಿ 5ರಿಂದ 7 ಕೆ.ಜಿ.ಗೆ ಏರಿಕೆ, 450 ರೂ.ಗೆ ಎಲ್‌ಪಿಜಿ ಸಿಲಿಂಡರ್‌, ಜತೆಗೆ 2 ಹೆಚ್ಚುವರಿ ಸಿಲಿಂಡ ರ್‌ಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದೆ.

Advertisement

ಇದಲ್ಲದೆ ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯ ಮಾದರಿಯಲ್ಲೇ ಮಹಿಳೆಯರಿಗೆ ಈಗ ನೀಡುತ್ತಿರುವ 1,000ರೂ. ಬದಲಾಗಿ ತಿಂಗಳಿಗೆ 2,500 ರೂ.ಗಳನ್ನು ನೀಡುವ ಭರವಸೆ ಕೊಡಲಾಗಿದೆ. ಎಸ್‌ಟಿ ಸಮುದಾಯದವರಿಗೆ ನೀಡಲಾಗುತ್ತಿರುವ ಮೀಸಲಾತಿ ಮಿತಿಯನ್ನು ಶೇ.26ರಿಂದ ಶೇ.28, ಎಸ್‌ಸಿ ಸಮುದಾಯದವರಿಗೆ ಶೇ.10ರಿಂದ ಶೇ.12, ಒಬಿಸಿ ಸಮುದಾಯದವರಿಗೆ ಶೇ.14ರಿಂದ ಶೇ.27ಕ್ಕೆ ಏರಿಸುವುದಾಗಿಯೂ ಘೋಷಿಸಿದೆ.

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ ಈಗಿನ 2,400 ರೂ. ಬದಲಾಗಿ 3,.200 ರೂ. ನೀಡಲಾಗು ತ್ತದೆ. ಪ್ರತಿ ಬ್ಲಾಕ್‌ಗಳಲ್ಲಿ ಪದವಿ ಕಾಲೇಜು, ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು, ವಿವಿ ಗಳನ್ನು ಸ್ಥಾಪಿಸಲಾಗುತ್ತದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next