Advertisement
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕಿನ 26 ಗ್ರಾಮ ಪಂಚಾಯತ್‌ಗಳ 30 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನ.12 ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಪರಿಶೀಲನೆಗೆ ನ.13, ನಾಮಪತ್ರ ಹಿಂಪಡೆಯಲು ನ.15 ಕೊನೆಯ ದಿನವಾಗಿದೆ. ಅಗತ್ಯವಿದ್ದರೆ ನ.23ರಂದು ಮತದಾನ ನಡೆಯಲಿದೆ. ನ.26ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ, ಕುವೆಟ್ಟು, ಇಳಂತಿಲ ಗ್ರಾಮ ಪಂಚಾಯತ್‌ನ ತಲಾ ಒಂದು ಸ್ಥಾನ, ಮಂಗಳೂರು ತಾಲೂಕಿನ ಗಂಜಿಮಠ, ಅಡ್ಯಾರ್, ಜೋಕಟ್ಟೆ, ನೀರುಮಾರ್ಗ ಪಂಚಾಯತ್‌ನ ತಲಾ 1, ಮೂಡುಶೆಡ್ಡೆ ಪಂಚಾಯತ್‌ನ 2 ಸ್ಥಾನ, ಬಂಟ್ವಾಳ ತಾಲೂಕಿನ ಮಂಚಿ, ಪೆರ್ನೆ, ಚೆನ್ನೈತ್ತೋಡಿ, ಸಜಿಪಮೂಡ, ಅಮಾrಡಿ, ಬಡಗ ಬೆಳ್ಳೂರು ಗ್ರಾ.ಪಂ.ನ ತಲಾ 1 ಸ್ಥಾನ, ಪಂಜಿಕಲ್ಲು 2 ಸ್ಥಾನ, ಸಜಿಪ ಮುನ್ನೂರು ಗ್ರಾ.ಪಂ.ನ 3 ಸ್ಥಾಗಳಿಗೆ ಉಪ ಚುನಾವಣೆ ನಡೆಯಲಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಮಂಡೆಕೋಲು, ನೆಲ್ಲೂರು ಕೆಮ್ರಾಜೆ ಗ್ರಾಪಂನ ತಲಾ 1 ಸ್ಥಾನಕ್ಕೆ, ಉಳ್ಳಾಲ ತಾಲೂಕಿನ ಮುನ್ನೂರು ಗ್ರಾ.ಪಂ.ನ 1 ಸ್ಥಾನಕ್ಕೆ, ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಕಟ್ರಾಪ್ಪಾಡಿ ಗ್ರಾ.ಪಂ.ನ ತಲಾ 1 ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಗ್ರಾ.ಪಂ.ನ 1 ಸ್ಥಾನಕ್ಕೆ, ಮೂಲ್ಕಿಯ ಹಳೆಯಂಗಡಿ ಗ್ರಾ.ಪಂ.ನ 1 ಮತ್ತು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾ.ಪಂ.ನ 1 ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.