Advertisement

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

11:35 PM Nov 12, 2024 | Team Udayavani |

ಮುಂಬಯಿ:  ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಶಿವಸೇನೆ (ಯುಬಿಟಿ) ನಾಯಕ ಉದ್ಧವ್‌ ಠಾಕ್ರೆ ಅವರ ಬ್ಯಾಗ್‌ಗಳನ್ನು ಯವತ್ಮಾಳ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನೂ ಅಪ್‌ಲೋಡ್‌ ಮಾಡಿದ್ದಾರೆ.

Advertisement

ಈ ಪ್ರಕರಣ ಮಂಗಳವಾರ ರಾಜಕೀಯ ಬಣ್ಣ ಪಡೆದುಕೊಂಡಿದ್ದು, “ಮಹಾಯುತಿ ನಾಯಕರ ಬ್ಯಾಗ್‌ಗಳನ್ನು ಆಯೋಗದ ಅಧಿಕಾರಿಗಳು ಏಕೆ ಪರಿಶೀಲಿಸುತ್ತಿಲ್ಲ. ಅವರು ಬ್ಯಾಗ್‌ನಲ್ಲಿ ಒಳವಸ್ತ್ರ ಮಾತ್ರ ಕೊಂಡೊಯ್ಯುತ್ತಾರಾ ಎಂದು ಸಂಸದ ಸಂಜಯ ರಾವತ್‌ ಪ್ರಶ್ನಿಸಿದ್ದಾರೆ. ಜತೆಗೆ ಮಹಾರಾಷ್ಟ್ರಕ್ಕೆ ಬರುವ ಪ್ರಧಾನಿ  ಮೋದಿ ಹಾಗೂ ಅಮಿತ್‌ ಶಾ ಅವರ ಬ್ಯಾಗನ್ನು ಪರಿಶೀಲನೆ ಮಾಡು ತ್ತೀರಾ ಎಂದು ಪ್ರಶ್ನಿಸಿದ್ದರು. ಆಪ್‌ ನಾಯಕರೂ ಕೂಡ ಬೆಳವಣಿಗೆಯನ್ನು ಖಂಡಿಸಿ ದ್ದಾರೆ.

ನಿಯಮದಂತೆ ನಡೆದುಕೊಂಡಿದ್ದೇವೆ: ಉದ್ಧವ್‌ ಠಾಕ್ರೆ ಅವರ ಬ್ಯಾಗ್‌ ಪರಿಶೀಲನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣ ಆಯೋಗ ನಾವು ಕಾನೂನಿನ ಪ್ರಕಾರ ನಡೆದುಕೊಂಡಿದ್ದೇವೆ. ಮತದಾರರನ್ನು ಸೆಳೆಯಲು ಉಡುಗೊರೆ ಕೊಡು ವುದನ್ನು ತಪ್ಪಿಸಲು ನಿಯಮಿತವಾಗಿ ಇಂತಹ ಪರಿಶೀಲನೆಗಳು ನಡೆಯುತ್ತಿರುತ್ತವೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next