Advertisement

By Election: ವಯನಾಡ್‌ ಉಪಸಮರ: ಶೇ.65ರಷ್ಟು ಮತದಾನ

11:29 PM Nov 13, 2024 | Team Udayavani |

ವಯನಾಡ್‌: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ಉಪಚುನಾವಣೆ ನಡೆದಿದೆ. ಸಂಜೆ 6ರ ವೇಳೆಗೆ ಶೇ.65ರಷ್ಟು ಮತದಾನ ದಾಖಲಾಗಿರುವುದಾಗಿ ಚುನಾವಣ ಆಯೋಗ ತಿಳಿಸಿದೆ. ಇದು ಕಳೆದ ಎಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆದ ಮತದಾನಕ್ಕಿಂತ ಕಡಿಮೆ ಎಂದೂ ಹೇಳಿದೆ.

Advertisement

ಎಪ್ರಿಲ್‌ನಲ್ಲಿ ವಯನಾಡ್‌ ಕ್ಷೇತ್ರದಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲಿ ಶೇ.74ರಷ್ಟು ಮತದಾನ ದಾಖಲಾಗಿತ್ತು. 2019ರಲ್ಲಿ ಶೇ.80ರಷ್ಟು ಮತದಾನ ನಡೆದಿತ್ತು. ಈ ಉಪಚುನಾವಣೆಯಲ್ಲಿ ಯುಡಿಎಫ್ನಿಂದ ರಾಹುಲ್‌ ಗಾಂಧಿ ಸೋದರಿ ಪ್ರಿಯಾಂಕಾ ವಾದ್ರಾ, ಬಿಜೆಪಿಯಿಂದ ನವ್ಯಾ ಹರಿದಾಸ್‌ ಹಾಗೂ ಸಿಪಿಎಂನಿಂದ ಸತ್ಯನ್‌ ಮೊಕೇರಿ ಸ್ಪರ್ಧಿಸಿದ್ದಾರೆ. ಬುಧವಾರ ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ ಪ್ರಿಯಾಂಕಾ, “ವಯನಾಡ್‌ ಜನತೆ ನನ್ನನ್ನು ತಮ್ಮ ಪ್ರತಿನಿಧಿಯಾಗಿ ಆರಿಸುವ ವಿಶ್ವಾಸ ಇದೆ’ ಎಂದಿದ್ದಾರೆ.

ಭೂಕುಸಿತ ಸಂತ್ರಸ್ತರ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಚುನಾವಣೆ!

ಕಳೆದ ಜು.30ರಂದು ವಯನಾಡ್‌ನ‌ಲ್ಲಿ ಸಂಭ­ವಿ­ಸಿದ್ದ ಭಾರೀ ಭೂಕುಸಿತದಿಂದ ಅಕ್ಷರಶಃ ಬೀದಿಗೆ ಬಂದಿದ್ದ ಸಂತ್ರಸ್ತರ ಭಾವನಾತ್ಮಕ ಕ್ಷಣಕ್ಕೆ ವಯನಾಡ್‌ ಕ್ಷೇತ್ರದ ಉಪ ಚುನಾವಣೆಯ ಮತಗಟ್ಟೆಗಳು ಸಾಕ್ಷಿಯಾದವು. ದುರಂತದ ಬಳಿಕ ಗ್ರಾಮ ತೊರೆದು ಬೇರೆಡೆ ವಾಸವಾಗಿದ್ದ­ವರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಪರಸ್ಪರ ಒಬ್ಬರನ್ನೊಬ್ಬರು ಕಂಡು ಭಾವು­ಕರಾಗಿದ್ದಲ್ಲದೆ, ಪರಸ್ಪರ ಆಲಿಂಗಿಸಿಕೊಂಡು ಕಣ್ಣೀರಿಟ್ಟ ಪ್ರಸಂಗ ನಡೆದಿವೆ. ಪುಂಚಿರಿಮಠಂ, ಚೂರಲ್‌ವುಲ ಮತ್ತು ಮುಂಡಕ್ಕೆ„ ಗ್ರಾಮಗಳ ನಿವಾಸಿಗಳು, ಎಲ್ಲರೂ ಹೇಗೆ ಒಟ್ಟಿಗೆ ಸೇರಿಕೊಂಡು ಸರ್ವಧರ್ಮಗಳ ಹಬ್ಬವನ್ನು ಆಚರಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡು ವೃದ್ಧರೊಬ್ಬರು ಕಣ್ಣೀರು ಹಾಕಿದರು. ಹಲವರು ಒಬ್ಬೊರನ್ನೊಬ್ಬರು ತಬ್ಬಿ ಸಂತೈಸಿದರು. ಕಷ್ಟ ಸುಖ ಹಂಚಿಕೊಂಡರು. ಹೇಗಿದ್ದೆವು ಎಂಬುದನ್ನು ನೆನೆದು ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next