Advertisement

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

01:46 PM Jan 10, 2025 | Team Udayavani |

ನಾಸಿಕ್: ತಾನು ಮದುವೆಯಾಗಬೇಕಿದ್ದ ಯುವತಿ ತನ್ನ ಮನೆಗೆ ಮಲತಾಯಿಯಾಗಿ ಬಂದರೆ ಹೇಗಾಗ ಬೇಡ, ಹೌದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಸಿಡ್ಕೊ ಪ್ರದೇಶದಲ್ಲಿ ಇಂತಹ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು ತಾನು ಮದುವೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯನ್ನೇ ಯುವಕನ ತಂದೆ ಮದುವೆಯಾಗಿ ಮನೆಗೆ ಬಂದಿರುವುದನ್ನು ಕಂಡು ಆಘಾತಕ್ಕೆ ಒಳಗಾದ ಮಗ ಕೊನೆಗೆ ಮದುವೆ ವಿಚಾರದಿಂದ ದೂರ ಉಳಿದು ಸನ್ಯಾಸಿಯಾಗುವತ್ತ ಮನ ಮಾಡಿದ್ದಾನೆ ಎನ್ನಲಾಗಿದೆ.

Advertisement

ಏನಿದು ಘಟನೆ:
ತಂದೆ, ಮಗ ನಾಸಿಕ್ ನ ಸಿಡ್ಕೊ ಪ್ರದೇಶದಲ್ಲಿ ವಾಸವಿದ್ದು ಇತ್ತ ಮಗನಿಗೆ ಮದುವೆಯ ವಯಸ್ಸು ಆಗಿರುವುದರಿಂದ ಕುಟುಂಬ ಸದಸ್ಯರು ಯುವಕನಿಗೆ ಹುಡುಗಿ ಹುಡುಕಲು ಆರಂಭಿಸಿದ್ದಾರೆ ಅದರಂತೆ ಒಂದು ಹುಡುಗಿಯೂ ಯುವಕನಿಗೆ ಇಷ್ಟವಾಗಿತ್ತು ಹಾಗೆಯೇ ಯುವತಿಗೂ ಹುಡುಗ ಇಷ್ಟವಾಗಿದ್ದ ಹಾಗಾದರೆ ಇನ್ನೇಕೆ ತಡ ಎಂದು ಎರಡು ಕಡೆಯವರು ಒಟ್ಟಿಗೆ ಮಾತುಕತೆ ನಡೆಸಿ ಮದುವೆ ದಿನಾಂಕವನ್ನು ನಿರ್ಧರಿಸಿದ್ದಾರೆ,

ಇತ್ತ ಯುವಕನ ಮನೆಯಲ್ಲಿ ಮದುವೆಗೆ ತಯಾರಿಗಳು ನಡೆಯುತ್ತಿತ್ತು ಇನ್ನೇನು ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿತ್ತು ಎನ್ನುವಷ್ಟರಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿಯ ಜೊತೆ ಯುವಕನ ತಂದೆಯೇ ಓಡಿ ಹೋಗಿ ಮದುವೆಯಾಗಿದ್ದಾನೆ ಎಂಬ ಆಘಾತಕಾರಿ ಸುದ್ದಿ ಯುವಕನ ಕಿವಿಗೆ ಬಿದ್ದಿದೆ ಇದರಿಂದ ಆಘಾತಕ್ಕೆ ಒಳಗಾದ ಯುವಕ ಪತ್ನಿಯಾಗಿ ಬರಬೇಕಾದವಳನ್ನು ಮಲತಾಯಿ ರೀತಿಯಲ್ಲಿ ನೋಡಬೇಕಲ್ಲಾ ಎಂದು ಆಲೋಚಿಸಿದ ಯುವಕ ಒಂದು ನಿರ್ಧಾರಕ್ಕೆ ಬಂದಿದ್ದಾನೆ.

ಇತ್ತ ಮನೆಗೆ ಸೊಸೆಯಾಗಿ ಬರಬೇಕಾದವಳನ್ನು ಮಾವನೇ ಮದುವೆಯಾದ ವಿಚಾರ ಊರಿಗೆಲ್ಲಾ ಗೊತ್ತಾಗಿ ಜನರು ಬೇರೆ ರೀತಿಯಲ್ಲಿ ಮಾತನಾಡಲು ಶುರುಮಾಡಿದ್ದಾರೆ ಇದನ್ನೆಲ್ಲಾ ಯೋಚಿಸಿದ ಯುವಕ ಕೊನೆಗೆ ಸನ್ಯಾಸಿಯಾಗುವ ನಿರ್ಧಾರಕ್ಕೆ ಬಂದಿದ್ದಾನೆ ಎನ್ನಲಾಗಿದೆ.

ಸದ್ಯ ತಂದೆಯ ಜೊತೆಗೆ ಇರದೆ ಬೇರೆ ಮನೆಯಲ್ಲಿ ಯುವಕ ವಾಸವಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next