Advertisement

Court Verdict: ಹಿಂದೂ ಸಂತ ಚಿನ್ಮಯ್‌ ದಾಸ್‌ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್

12:08 PM Jan 02, 2025 | Team Udayavani |

ಢಾಕಾ: ದೇಶದ್ರೋಹದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅವರ ಜಾಮೀನು ಅರ್ಜಿ ಯನ್ನು ನ್ಯಾಯಾಲಯವು ಗುರುವಾರ(ಜ.2) ತಿರಸ್ಕರಿಸಿದೆ.

Advertisement

ಚಿನ್ಮಯ್‌ ಅವರ ಪರವಾಗಿ ಒಟ್ಟು 11 ವಕೀಲರು ಚಟ್ಟೋಗ್ರಾಮ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದು ನ್ಯಾಯಾಧೀಶರಾದ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಮೆಟ್ರೋಪಾಲಿಟನ್ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಮೊಫಿಜುರ್ ಹಕ್ ಭುಯಾನ್ ಅವರನ್ನು ಉಲ್ಲೇಖಿಸಿ ದಿ ಡೈಲಿ ಸ್ಟಾರ್ ವರದಿ ಮಾಡಿದೆ.

ಈ ಹಿಂದೆ ಡಿಸೆಂಬರ್ 12 ರಂದು ಚಿನ್ಮಯಿ ದಾಸ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲ ರಬೀಂದ್ರ ಘೋಷ್ ಯಾವುದೇ ಪವರ್ ಆಫ್ ಅಟಾರ್ನಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದ ಕಾರಣ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆಯನ್ನುಜನವರಿ ೨ಕ್ಕೆ ಮುಂದೂಡಿತ್ತು.

ಇದನ್ನೂ ಓದಿ: Butterfly Park: ಬೆಳಗಾವಿಯ ಹಿಡಕಲ್‌ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next