Advertisement

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

12:27 AM Jan 03, 2025 | Team Udayavani |

ಮುಂಬಯಿ: ವಿಭಜನೆಗೊಂಡಿರುವ ರಾಷ್ಟ್ರೀಯ ವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಶೀಘ್ರದಲ್ಲಿಯೇ ಒಂದಾಗ ಲಿದೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ತಾಯಿ ಆಶಾತಾಯಿ ಇಂಥ ಬಯಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಹೊಸ ಚರ್ಚೆ ಶುರುವಾಗಿದೆ.

Advertisement

ಬುಧವಾರ ಪಂಢರಾಪುರದಲ್ಲಿ ಮಾತನಾಡಿ “ಪವಾರ್‌ ಕುಟುಂಬದ ಭಿನ್ನಾಭಿಪ್ರಾಯ ಶೀಘ್ರ ಪರಿಹಾರವಾಗಬೇಕು. ಈ ಬಗ್ಗೆ ಪಂಢರಾಪುರ ಪಾಂಡುರಂಗನೇ ನನ್ನ ಪ್ರಾರ್ಥನೆಗೆ ಉತ್ತರ ಹೇಳುವ ನಿರೀಕ್ಷೆ ಇದೆ’ ಎಂದಿದ್ದರು. 2 ಬಣಗಳು ವಿಲೀನ ಆಗಬೇಕು ಎಂಬ ಅಜಿತ್‌ ತಾಯಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಪ್ರಫ‌ುಲ್‌ ಪಟೇಲ್‌ “ಇದು ನಿಜವಾದರೆ ಅದೊಂದು ಅತ್ಯುತ್ತಮ ಬೆಳವಣಿಗೆ ಶರದ್‌ ಪವಾರ್‌ ನಮ್ಮ ದೇವರು. ಅವರ ಬಗ್ಗೆ ಗೌರವ ಇದೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next