Advertisement

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

08:02 PM Jan 08, 2025 | Team Udayavani |

ಬುಲ್ಡಾಣ: ಮಹಾರಾಷ್ಟ್ರದ 3 ಗ್ರಾಮಗಳಲ್ಲಿ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಜನ ಗಾಬರಿಯಾಗಿದ್ದಾರೆ. ಜನರ ತಲೆಕೂದಲು ವಿಪರೀತವಾಗಿ ಉದುರಲು ಆರಂಭವಾಗಿದ್ದು, ಒಂದೇ ವಾರದಲ್ಲಿ ಜನ ಬೋಳುತಲೆಯವರಾಗುತ್ತಿದ್ದಾರೆ.

Advertisement

ನೀರು ಕಲುಷಿತಗೊಂಡಿರುವುದರಿಂದ ಈ ಸಮಸ್ಯೆಯಾಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದು, ಪರೀಕ್ಷೆಗಾಗಿ ನೀರು, ಕೂದಲು ಮತ್ತು ಚರ್ಮದ ಮಾದರಿಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಬೋರಗ್ರಾಮ, ಕಾಲ್ವಾದ್‌ ಮತ್ತು ಹಿಂಗ್ನಾ ಗ್ರಾಮಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕೂದಲು ಉದುರುತ್ತಿರುವ, ತಲೆ ಬೊಕ್ಕವಾಗಿರುವ ಫೋಟೋ, ವಿಡಿಯೋಗಳನ್ನು ಜನ ಹಂಚಿಕೊಂಡಿದ್ದು, ಇವು ವೈರಲ್‌ ಆಗಿವೆ.

ಸುಮಾರು 50 ಜನ ಈ ಸಮಸ್ಯೆಗೆ ತುತ್ತಾಗಿದ್ದು, ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯುವುದಾಗಿ ವೈದ್ಯಕೀಯ ತಂಡ ಭರವಸೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next